ನವದೆಹಲಿ: ಈ ಬಾರಿಯ ನೀಟ್ ಪಿಜಿ ಪರೀಕ್ಷೆ ನಿಗದಿಯಂತೆ ಮೇ 21ಕ್ಕೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಜುಲೈ 9 ರಂದು ಪರೀಕ್ಷೆ ನಡೆಯಲಿದೆ ಎಂಬುದಾಗಿ ಹೊರಡಿಸಿರುವ ನೋಟಿಸ್ ನಕಲಿ ಎಂದು ಪಿಐಬಿ ಶನಿವಾರ ತಿಳಿಸಿದೆ.
ತನ್ನ ಹೆಸರಿನಲ್ಲಿ ಹರಿದಾಡಿರುವ ಸುಳ್ಳು ಮಾಹಿತಿ ವಿರುದ್ಧ ಪಾಲುದಾರರು ನಿಗಾ ವಹಿಸುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೇಳಿದೆ. ನೀಟ್ ಪರೀಕ್ಷೆ ಜುಲೈ 9ಕ್ಕೆ ಮುಂದೂಡಿಕೆಯಾಗಿರುವುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ನೀಟ್ ಪರೀಕ್ಷೆ ಮುಂದೂಡಲಾಗಿದೆ ಎಂಬುದಾಗಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಹೊರಡಿಸಿರುವ ನೋಟಿಸ್ ನಕಲಿಯಾಗಿದೆ. ಪರೀಕ್ಷೆ ಮುಂದೂಡಿಕೆಯಾಗಿಲ್ಲ. ಮೇ 21ಕ್ಕೆ ಪರೀಕ್ಷೆ ನಡೆಯಲಿದೆ ಎಂದು ಪಿಐಬಿ ಪ್ಯಾಕ್ಟ್ ಚೆಕ್ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.