ಕಾಸರಗೋಡು: ಸಂತೋಷ್ ಟ್ರೋಫಿ ರಾಷ್ಟ್ರೀಯ ಚಾಂಪಿಯನ್‍ಶಿಪ್ ಗೆದ್ದ ಕೇರಳ ಸಂತೋಷ್ ಟ್ರೋಫಿ ತಂಡದ ಸದಸ್ಯರು, ತರಬೇತುದಾರರು, ಮ್ಯಾನೇಜರ್ ಮತ್ತು ಟೀಮ್ ಫಿಸಿಯೋ ಒಳಗೊಂಡ ಸಂಪೂರ್ಣ ತಂಡವನ್ನು ಗೌರವಿಸುವ ಸಮಾರಂಭ ಮೇ 21 ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್‍ನಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಫುಟ್‍ಬಾಲ್ ಅಸೋಸಿಯೇಷನ್ ವತಿಯಿಂದ ಕಾರ್ಯಕ್ರಮ ನಡೆಯುವುದು.
ಜಿಲ್ಲಾ ಫುಟ್‍ಬಾಲ್ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಡಿಎಫ್‍ಎ ಅಡಿಯಲ್ಲಿರುವ 42 ಸದಸ್ಯ ಕ್ಲಬ್‍ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ತಂಡದ ಸದಸ್ಯರು, ಕನಿಷ್ಠ ಹತ್ತು ಡಿಎಫ್‍ಎ ಕ್ಲಬ್‍ನ ಸದಸ್ಯರು ತಂಡದ ಜೆರ್ಸಿ, ಜಿಲ್ಲಾ ಅಕಾಡೆಮಿ ಮತ್ತು ಅಕಾಡೆಮಿ ಜರ್ಸಿಗಳನ್ನು ಧರಿಸಿ, ಜಿಲ್ಲೆಯ ಪ್ರಮುಖ ಅಕಾಡೆಮಿಗಳಿಂದ ಜೂನಿಯರ್ ಮತ್ತು ಸಬ್‍ಜೂನಿಯರ್ ತಂಡದ ಸದಸ್ಯರು ಕಾಸರಗೋಡು ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಪ್ರತಿನಿಧಿಗಳು, ಕ್ರೀಡಾಪಟುಗಳನ್ನು ಒಳಗೊಂಡ ಪಥಸಂಚಲನವನ್ನು ಆಯೋಜಿಸಲಾಗಿದೆ.
ಜಿಲ್ಲೆಯ ಶಾಸಕರು, ಸಂಸದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಕಾಸರಗೋಡು ನಗರಸಭೆ ಅಧ್ಯಕ್ಷ, ಜಿಲ್ಲಾಧಿಕಾರಿ, ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿರುವುದಾಗಿ ಜಿಲ್ಲಾ ಫುಟ್ಬಾಲ್ ಸಂಸ್ಥೆಪ್ರಕಟಣೆ ತಿಳಿಸಿದೆ.