ನವದೆಹಲಿ: ದೇಶದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 24 ಸೋಂಕಿತರು ಸಾವನ್ನಪ್ಪಿದ್ದು, 2,827 ಹೊಸ ಕೇಸ್ ಪತ್ತೆಯಾಗಿದೆ.
ಚೇತರಿಕೆ ಪ್ರಮಾಣ ಹೆಚ್ಚಳದೊಂದಿಗೆ ದೇಶದಲ್ಲಿ ಸದ್ಯ 19,067 ಸಕ್ರಿಯ ಪ್ರಕರಣಗಳಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 3,230 ಸೋಂಕಿತರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.98.74 ರಷ್ಟಿದೆ.14,85,292 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.