ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಬಾಲಾಲಯ ಪ್ರತಿಷ್ಠೆ ಮೇ.25 ಬುಧವಾರ ನಡೆಯಲಿರುವುದು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ಬೆಳಗ್ಗೆ 7 ರಿಂದ 8.05ರ ಶುಭ ಮುಹೂರ್ತದಲ್ಲಿ ಬಾಲಾಲಯ ಪ್ರತಿಷ್ಠಾ ವಿಧಿಗಳು ನಡೆಯಲಿರುವುದು. ಊರ ಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.