ದೆಹಲಿ: ಬಹುಮಹಡಿ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅದರಲ್ಲಿ ಕನಿಷ್ಠ 26 ಮಂದಿ ಸಾವಿಗೀಡಾಗಿದ್ದು, 40 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಅಗ್ನಿದುರಂತ ಸಂಭವಿಸಿದೆ.

ಪಶ್ಚಿಮ ದೆಹಲಿಯ ಮುಂಡ್ಕ ಮೆಟ್ರೊ ಸ್ಟೇಷನ್ ಬಳಿಯ ನಾಲ್ಕು ಮಹಡಿಯ ವಾಣಿಜ್ಯ ಕಟ್ಟಡದಲ್ಲಿ ಇಂದು ಈ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇದುವರೆಗೆ 26 ಶವಗಳನ್ನು ಹೊರತೆಗೆಯಲಾಗಿದ್ದು, 40 ಮಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, 60ರಿಂದ 70 ಜನರನ್ನು ಈ ಕಟ್ಟಡದಿಂದ ಈಗಾಗಲೇ ರಕ್ಷಿಸಲಾಗಿದ್ದು, ಇನ್ನೂ ಒಂದು ಮಹಡಿಯಲ್ಲಿ ಶೋಧ ನಡೆಯಬೇಕಿದೆ. ಘಟನಾ ಸ್ಥಳಕ್ಕೆ 20 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ನೂರಾರು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿದ್ದು, ಪರಿಸ್ಥಿತಿ ಇನ್ನೂ ಪೂರ್ತಿಯಾಗಿ ನಿಯಂತ್ರಣಕ್ಕೆ ಬಂದಿಲ್ಲವಾದ್ದರಿಂದ ಕಾರ್ಯಾಚರಣೆ ಮುಂದುವರಿದಿದೆ.
ದುರಂತದಲ್ಲಿ ಸಾವಿಗೀಡಾದವರಿಗೆ ಶಾಂತಿ ಕೋರಿ, ಅವರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಂತಾದವರು ಸಾಂತ್ವನ ತಿಳಿಸಿದ್ದಾರೆ.