ಕೋಝಿಕ್ಕೋಡ್: ಜನ ವಸತಿ ರಹಿತ ಸ್ಥಳವೊಂದರಲ್ಲಿ ಮದ್ದು ಗುಂಡುಗಳು ಪತ್ತೆಯಾಗಿವೆ. 266 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಗುಂಡುಗಳನ್ನು ಪಿಸ್ತೂಲ್ ಮತ್ತು ರೈಫಲ್‍ಗಳಲ್ಲಿ ಬಳಸುವಂತದ್ದು ಎಂದು ಪೋಲೀಸರು ತಿಳಿಸಿದ್ದಾರೆ. ತರಬೇತಿಗೆ ಬಂದವರು ಬುಲೆಟ್ ಬಳಸಿರಬಹುದು ಎಂಬುದು ಪ್ರಾಥಮಿಕ ತೀರ್ಮಾನವಾಗಿದ್ದು, ತನಿಖೆ ವಿಸ್ತರಿಸಲಾಗಿದೆ.