ಬೆಂಗಳೂರು: ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಿಇಒ ಎಂಡಿ ರಾಜೇಶ್ ಗೋಪಿನಾಥ್ 2022 ರಲ್ಲಿ ಬರೊಬ್ಬರಿ 25.76 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ. 2021 ನೇ ಸಾಲಿನಲ್ಲಿದ್ದ 20.36 ಕೋಟಿ ರೂಪಾಯಿ ವೇತನಕ್ಕಿಂತ ಇದು ಶೇ.27 ರಷ್ಟು ಏರಿಕೆಯಾಗಿರುವ ವೇತನವಾಗಿದೆ.
ಕಂಪನಿಯ ವಾರ್ಷಿಕ ವರದಿಯ ಪ್ರಕಾರ ಗೋಪಿನಾಥ್ ಅವರಿಗೆ 1.51 ವೇತನವಿದ್ದು, ಪ್ರಯೋಜನಗಳು ಮತ್ತು ಭತ್ಯೆಗಳು 2.25 ಕೋಟಿ ರೂಪಾಯಿಗಳು ಸೇರಿ 22 ಕೋಟಿ ರೂಪಾಯಿ ಮೊತ್ತದ ಒಟ್ಟು ಪ್ಯಾಕೇಜ್ ನ್ನು ಪಡೆಯುತ್ತಿದ್ದಾರೆ.
ಟಿಸಿಎಸ್ ಸಿಒಒ ಹಾಗೂ ಕಾರ್ಯಕಾರಿ ನಿರ್ದೇಶಕ ಎನ್ ಗೋಪಿನಾಥ್ ಸುಬ್ರಹ್ಮಣಿಯಮ್ ಅವರು 1.44 ಕೋಟಿ ರೂಪಾಯಿ ವೇತನ, 2.24 ಕೋಟಿ ರೂಪಾಯಿಗಳ ಪ್ರಯೋಜನ, ಭತ್ಯೆಗಳು ಸೇರಿ 20.7 ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಪಡೆಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಇವರ ವೇತನದಲ್ಲಿ ಶೇ.29 ರಷ್ಟು ಏರಿಕೆಯಾಗಿದ್ದು, 2017 ರಲ್ಲಿ 5 ವರ್ಷಗಳ ಅವಧಿಗೆ ಗೋಪಿನಾಥ್ ಅವರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಹಾಗೂ ಅವಧಿ ಮುಕ್ತಾಯಗೊಂಡ ಬಳಿಕ 2027 ರ ಫೆಬ್ರವರಿ 20 ವರೆಗೂ ಅವಧಿಯನ್ನು ವಿಸ್ತರಿಸಲಾಗಿತ್ತು.