HEALTH TIPS

ಕೋವಿಡ್ ಬಳಿಕ 30 ತಾಸಿಗೊಬ್ಬ ಹೊಸ ಶತಕೋಟ್ಯಧೀಶ: ಪ್ರತಿ 33 ಗಂಟೆಗೆ 10 ಲಕ್ಷ ಜನರು ಕಡುಬಡತನಕ್ಕೆ..

            ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದ ಜಗತ್ತು ತತ್ತರಿಸಿರುವುದರ ಜತೆಗೆ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಕೋಟ್ಯಂತರ ಜನರು ದಟ್ಟದಾರಿದ್ರ್ಯಕ್ಕೀಡಾಗಿದ್ದಾರೆ. ಇದರ ಮಧ್ಯೆ, ಪ್ರಸಕ್ತ ವರ್ಷದಲ್ಲಿ ಪ್ರತಿ 30 ತಾಸಿಗೊಮ್ಮೆ ಒಬ್ಬ ಶತಕೋಟ್ಯಧೀಶ ಹುಟ್ಟಿಕೊಳ್ಳುತ್ತಿದ್ದಾನೆ.

               ಪ್ರತಿ 33 ಗಂಟೆಗೆ ಹತ್ತು ಲಕ್ಷ ಜನರು ಕಡುಬಡವರಾಗುತ್ತಿದ್ದಾರೆ ಎಂದು ಆಕ್ಸ್​ಫಾಮ್ ಇಂಟರ್​ನ್ಯಾಷನಲ್ ಸಂಸ್ಥೆ ಹೇಳಿದೆ.

             ಈ ವರ್ಷ ಶತಕೋಟ್ಯಧೀಶರ ಸಂಖ್ಯೆ 573 ಹೆಚ್ಚಳವಾಗುವ ಮೂಲಕ 2,700ಕ್ಕೆ ತಲುಪಿದೆ. ಇವರ ಒಟ್ಟಾರೆ ಆಸ್ತಿ ಮೌಲ್ಯ 3.80 ಲಕ್ಷ ಕೋಟಿ ಡಾಲರ್​ನಿಂದ 12.70 ಲಕ್ಷ ಕೋಟಿ ಡಾಲರ್​ಗೆ ಏರಿಕೆ ಆಗಿದೆ. ಶ್ರೀಮಂತರ ಸಿರಿವಂತಿಕೆಯು ಕರೊನಾದ ಮೊದಲ 24 ತಿಂಗಳಲ್ಲಿ 23 ವರ್ಷದ ಸರಾಸರಿ ಏರಿಕೆಗಿಂತ ಹೆಚ್ಚಾಗಿದೆ. ವಿಶ್ವದ ಮೊದಲ ಹತ್ತು ಅತಿ ಶ್ರೀಮಂತರ ಆಸ್ತಿ ಕೋವಿಡ್ ಕಾಲದಲ್ಲಿ ಶೇ. 40ರಷ್ಟು ಅಧಿಕವಾಗಿದೆ ಎಂದು ಆಕ್ಸ್​ಫಾಮ್ ಇಂಟರ್​ನ್ಯಾಷನಲ್​ನ 'ಪ್ರಾಫಿಟಿಂಗ್ ಫ್ರಮ್ ಪೇನ್' ವರದಿ ತಿಳಿಸಿದೆ.

               ಕೋವಿಡ್ ಸಂಕಷ್ಟದ ಅವಧಿಯಲ್ಲಿ 40 ಹೊಸ ಔಷಧ ಕಂಪನಿಗಳು ಶತಕೋಟ್ಯಧಿಪತಿಗಳಾಗಿವೆ. ಮಾಡರ್ನಾ, ಫೈಜರ್​ನಂತಹ ಕಂಪನಿಗಳು ಪ್ರತಿ ಸೆಕೆಂಡ್​ಗೆ ಸಾವಿರ ಡಾಲರ್ ಲಾಭ ಗಳಿಸುತ್ತಿವೆ. ಇವುಗಳು ಉತ್ಪಾದಿಸುತ್ತಿರುವ ಔಷಧಕ್ಕೆ ತಗುಲುವ ವೆಚ್ಚಕ್ಕಿಂತ 24 ಪಟ್ಟು ಹೆಚ್ಚಿನ ದರಕ್ಕೆ ಅದನ್ನು ಸರ್ಕಾರಗಳಿಗೆ ಮಾರಾಟ ಮಾಡುತ್ತಿವೆ ಎಂದು ವರದಿ ಹೇಳಿದೆ.

2022ರಲ್ಲಿ 263 ದಶಲಕ್ಷ ಜನರು ತೀವ್ರ ಬಡತಕ್ಕೆ ನೂಕಲ್ಪಟ್ಟಿದ್ದಾರೆ. ದುಡಿಯುವ ವರ್ಗದ ಪೈಕಿ ಉತ್ತರಾರ್ಧದಲ್ಲಿ ಗುರುತಿಸಲ್ಪಡುವ ಶೇ. 50ರಷ್ಟು ಮಂದಿ 112 ವರ್ಷ ದುಡಿಮೆ ಮಾಡಿದರೆ ಅತಿ ಶ್ರೀಮಂತರ ಸಾಲಿನಲ್ಲಿ ಮೊದಲಿರುವ ವ್ಯಕ್ತಿಯ ವಾರ್ಷಿಕ ಗಳಿಕೆಯಷ್ಟು ಸಂಪಾದನೆ ಮಾಡಬಹುದಾಗಿದೆ ಎಂದು ವರದಿ ವಿವರಿಸಿದೆ.

                ಭಾರತ ಸೇರಿ 16 ರಾಷ್ಟ್ರಗಳ ಪ್ರವಾಸ ನಿಷೇಧಿಸಿದ ಸೌದಿ: ಸೌದಿ ಅರೇಬಿಯಾದಲ್ಲಿ ಕೆಲವು ವಾರದಿಂದೀಚೆಗೆ ಕೋವಿಡ್ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇರಿ 16 ರಾಷ್ಟ್ರಗಳಿಗೆ ಪಯಣಿಸುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಲೆಬೆನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥೋಪಿಯಾ, ಕಾಂಗೊ ಗಣರಾಜ್ಯ, ಲಿಬಿಯಾ, ಇಂಡೋನೇಷ್ಯಾ, ವಿಯೆಟ್ನಾಂ, ಅಮೇನಿಯಾ, ಬೆಲಾರಸ್, ವೆನೆಜುವೆಲಾ ಪ್ರಯಾಣ ನಿಷೇಧಕ್ಕೆ ಒಳಗಾದ ಇತರ ದೇಶಗಳಾಗಿವೆ.

ಒಮಿಕ್ರಾನ್ ಉಪತಳಿ ತೆಲಂಗಾಣದಲ್ಲಿ ಪತ್ತೆ: ಒಮಿಕ್ರಾನ್​ನ ಉಪತಳಿಯಾದ ಬಿಎ.5 ತೆಲಂಗಾಣದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಸಾರ್ಸ್-ಕೋವಿ-2 ಸೋಂಕಿನ ಜೀನೋಮಿಕ್ಸ್ ಒಕ್ಕೂಟ (ಐಎನ್​ಎಸ್​ಎಸಿಒಜಿ) ದೃಢಪಡಿಸಿದೆ. 80 ವರ್ಷ ವೃದ್ಧರೊಬ್ಬರಲ್ಲಿ ಈ ತಳಿ ಕಂಡುಬಂದಿದೆ. ಆದರೆ, ಇವರು ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ಹೋಗಿಲ್ಲ ಮತ್ತು ಎರಡೂ ಡೋಸ್ ಲಸಿಕೆಯನ್ನು ಅವರು ಪಡೆದುಕೊಂಡಿದ್ದಾರೆ. ಕರೊನಾದ ಲಘು ಗುಣಲಕ್ಷಣಗಳು ಅವರಲ್ಲಿ ಕಂಡಿವೆ ಎಂದು ತಿಳಿಸಿದೆ. ಹೈದರಾಬಾದ್ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರಲ್ಲಿ ಬಿಎ.4 ತಳಿಯ ಸೋಂಕು ಪತ್ತೆಯಾಗಿದೆ ಎಂದೂ ಹೇಳಿದೆ. ಭಾರತದಲ್ಲಿ ಸೋಮವಾರ ಬೆಳಿಗ್ಗೆಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ 2,022 ಹೊಸ ಪ್ರಕರಣಗಳು ವ್ಯಕ್ತವಾಗಿದ್ದು, 46 ಮಂದಿ ಸಾವನ್ನಪ್ಪಿದ್ದಾರೆ.

              ಕೋವಿಡ್​ನಿಂದ ರ್ಪಾನ್​ಸನ್ ಸಾಧ್ಯತೆ: ಕೋವಿಡ್ ಪೀಡಿತರು ಮಿದುಳಿನ ಸಮಸ್ಯೆಗೆ ಗುರಿಯಾಗಿ ರ್ಪಾನ್​ಸನ್ (ಕೈಕಾಲು ನಡುಕ) ಕಾಯಿಲೆಗೀಡಾಗುವ ಅಪಾಯ ಹೆಚ್ಚಿದೆ ಎಂದು ಅಧ್ಯಯನವೊಂದು ಹೇಳಿದೆ. ಇಲಿಗಳಿಗೆ ಸೋಂಕನ್ನು ಚುಚ್ಚಿ ಅವುಗಳನ್ನು ಚೇತರಿಸಿಕೊಳ್ಳಲು ಬಿಟ್ಟು ನಂತರ ಮಿದುಳಿನ ಮೇಲೆ ಆದ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸೋಂಕು ಪೀಡಿತ ಇಲಿಗಳಲ್ಲಿ ಶೇ. 80ರಷ್ಟು 38 ದಿನಗಳಲ್ಲಿ ಚೇತರಿಸಿಕೊಂಡವು. ಈ ಪೈಕಿ ಒಂದು ಗುಂಪಿಗೆ ಮತ್ತು ಕೋವಿಡ್ ಸೋಂಕಿಗೆ ಒಳಗಾಗದ ಇನ್ನೊಂದು ಗುಂಪಿಗೆ ರ್ಪಾನ್​ಸನ್​ಗೀಡುಮಾಡುವ ಎಂಪಿಟಿಪಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ಚುಚ್ಚಲಾಯಿತು. 2 ವಾರದ ನಂತರ ಕೋವಿಡ್​ನಿಂದ ಚೇತರಿಸಿಕೊಂಡ ಗುಂಪಿನ ಇಲಿಗಳಲ್ಲಿ ಮಿದುಳಿನ ಸಮಸ್ಯೆ ಕಂಡುಬಂದವು. ಆದರೆ, ಸೋಂಕು ರಹಿತ ಇಲಿಗಳಲ್ಲಿ ಪರಿಣಾಮ ಬೀರಲಿಲ್ಲ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries