ಮುಂಬೈ: ಬುಧವಾರದಂದು ಆರಂಭಿಕ ವಹಿವಾಟಿನಲ್ಲಿ ಈಕ್ವಿಟಿ ಬೆಂಚ್ ಮಾರ್ಕ್ ಪುಟಿದೆದ್ದಿದ್ದು, ಸೆನ್ಸೆಕ್ಸ್ 327 ಅಂಕಗಳನ್ನು ಗಳಿಸಿದ್ದು, ಏಷ್ಯನ್ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಟ್ರೆಂಡ್ ದಾಖಲಾಗಿದೆ.
30-ಷೇರ್ ಬಿಎಸ್ಇ ಸೆನ್ಸೆಕ್ಸ್ 326.98 ಪಾಯಿಂಟ್ ಗಳಷ್ಟು ಏರಿಕೆಯೊಂದಿಗೆ 54,379.59 ಪಾಯಿಂಟ್ ಗಳಿಗೆ ತಲುಪಿದೆ. ಎನ್ಎಸ್ಇ ನಿಫ್ಟಿ 98.2 ಪಾಯಿಂಟ್ ಗಳೊಂದಿಗೆ 16,223.35 ಪಾಯಿಂಟ್ ಗಳಿಗೆ ಏರಿಕೆಯಾಗಿದೆ. ಪ್ರಾರಂಭಿಕ ವಹಿವಾಟಿನಲ್ಲಿ ಇಂಡಸ್ ಲ್ಯಾಂಡ್ ಬ್ಯಾಂಕ್, ನೆಸ್ಲೆ, ಕೋಟಕ್ ಮಹೀಂದ್ರಾ ಬ್ಯಾಂಕ್, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಎನ್ ಟಿಪಿಸಿ, ಹೆಚ್ ಡಿಎಫ್ ಸಿ ಪ್ರಮುಖ ಗಳಿಕೆದಾರ ಸಂಸ್ಥೆಗಳಾಗಿದ್ದವು.
ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಟಿಸಿಎಸ್, ಹೆಚ್ ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಟಾಟಾ ಸ್ಟೀಲ್ ನ ಷೇರುಗಳು ಮಂಕಾಗಿದ್ದವು. ಮಂಗಳವಾರ ಬಿಎಸ್ಇ ಬೆಂಚ್ ಮಾರ್ಕ್ 236 ಅಂಕಗಳಷ್ಟು ಅಥವಾ ಶೇ.0.43 ರಷ್ಟು ಕುಸಿತ ಕಂಡಿತ್ತು.