ಕೋಟಾ: ಕೋಟಾ ಮೂಲದ ವ್ಯಕ್ತಿಯೋರ್ವರು ಐದು ವರ್ಷಗಳ ಕಾನೂನು ಹೋರಾಟದಲ್ಲಿ ಗೆದ್ದು ರೈಲ್ವೆಯಿಂದ 35 ರೂ.ಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಸುಮಾರು 3 ಲಕ್ಷ ಜನರಿಗೂ ಈ ಪ್ರಕ್ರಿಯೆ ಸಹಾಯ ಮಾಡಿದೆ.
2.98 ಲಕ್ಷ ಐಆರ್ ಸಿಟಿಸಿ ಬಳಕೆದಾರರಿಗೆ ರೈಲ್ವೆಯು ರೂ. 2.43 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬಹುತೇಕರು ಹಲವು ಟಿಕೆಟ್ ಪಡೆದಿರಬಹುದೆಂದು ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ ಸಲ್ಲಿಸಿದ ಆರ್ ಟಿಐಗೆ ಉತ್ತರಿಸಲಾಗಿದೆ.
ಸುಮಾರು 50 ಆರ್ ಟಿಐ ಅರ್ಜಿ ಮತ್ತು ನಾಲ್ಕು ಸರ್ಕಾರಿ ಇಲಾಖೆಗೆ ಹಲವು ಪತ್ರ ಬರೆದು ಜಿಎಸ್ ಟಿ ಅನುಷ್ಟಾನವಾಗುವುದಕ್ಕೂ ಮುನ್ನ ತನ್ನ ಟಿಕೆಟ್ ರದ್ದಾಗಿದ್ದರು ಸೇವಾ ಶುಲ್ಕವಾಗಿ ಪಡೆದಿದ್ದ ರೂ. 35 ರೂಪಾಯಿಯನ್ನು ಹೋರಾಟದೊಂದಿಗೆ ಮರಳಿ ಪಡೆದಿರುವುದಾಗಿ ಸ್ವಾಮಿ ಹೇಳಿದ್ದಾರೆ.
ಪ್ರತಿ ಟಿಕೆಟ್ ಬೆಲೆ ರೂ.35 ರಂತೆ ಒಟ್ಟಾರೇ 2.43 ಕೋಟಿ ರೂಪಾಯಿಯನ್ನು 2.98 ಬಳಕೆದಾರರು ಹಿಂಪಡೆಯಲಿದ್ದಾರೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಆರ್ ಟಿಐ ಪ್ರಶ್ನೆಗೆ ಉತ್ತರಿಸಿರುವುದಾಗಿ ಸ್ವಾಮಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಿಎಸ್ ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವರಿಗೆ ಪದೇ ಪದೇ ಮಾಡಿದ ಟ್ವೀಟ್ ಗಳಿಂದ 2.98 ಲಕ್ಷ ಬಳಕೆದಾರರು ರೂ.35 ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಜಿಎಸ್ ಟಿ ಅನುಷ್ಠಾನವಾಗುವ ಮುನ್ನವೇ ತಾನು ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ಶುಲ್ಕವಾಗಿ 35 ರೂ. ಹೆಚ್ಚುವರಿ ಹಣ ಪಡೆಯಲಾಗಿತ್ತು. ನಂತರ ರೈಲ್ವೆ ಮತ್ತು ಹಣಕಾಸು ಸಚಿವಾಲಯಕ್ಕೆ ಆರ್ ಟಿಐ ಸಲ್ಲಿಸುವ ಮೂಲಕ 35 ರೂ. ವಾಪಸ್ ಪಡೆದು ಸ್ವಾಮಿ ಹೋರಾಟ ಆರಂಭಿಸಿದ್ದರು. ಇದೀಗ ಹೆಚ್ಚುವರಿಯಾಗಿ ಪಡೆಯಲಾಗಿದ್ದ ರೂ. 35 ಹಣ ತನ್ನಗೆ ವಾಪಸ್ ಬಂದಿರುವುದು ಸಂತೋಷವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.