ಫ್ಯೊಂಗ್ ಯಾಂಗ್: ಉತ್ತರ ಕೊರಿಯಾದಲ್ಲಿ ಹರಡುತ್ತಿರುವ ಅಜ್ಞಾತ ಜ್ವರವು ಸುಮಾರು 3,50,000 ಜನರನ್ನು ಬಾಧಿಸತೊಡಗಿದೆ ಎಂದು ಉತ್ತರ ಕೊರಿಯಾದ ಮಾಧ್ಯಮವೊಂದು ವರದಿ ಮಾಡಿದೆ.
ಈ ಜ್ವರದ ಬಗ್ಗೆ ಉತ್ತರ ಕೊರಿಯಾದಲ್ಲಿ ಭೀತಿ ಆವರಿಸಿದ್ದು, ಇಲ್ಲಿಯವರೆಗೂ 1,62,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಯೊನ್ ಹಾಪ್ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಈ ಜ್ವರ ಕೋವಿಡ್-19 ಗೆ ಸಂಬಂಧಿಸಿದೆ ಎಂಬುದು ತಿಳಿದಿಲ್ಲ. ಕೋವಿಡ್-19 ಮೊದಲ ಪ್ರಕರಣ ಖಚಿತವಾದ ನಂತರ ಈ ಜ್ವರ ಹರಡುತ್ತಿರುವಂತೆಯೇ, ಆರು ಮಂದಿ ಸಾವನ್ನಪ್ಪಿದ್ದಾರೆ. ಹೊಸ ಸೋಂಕು ಉತ್ತರ ಕೊರಿಯಾ ಅಧಿಕಾರಿಗಳು ಕಂಗಾಲು ಮಾಡಿದೆ.