ಕೋಝಿಕ್ಕೋಡ್ :ಕೇರಳದಾದ್ಯಂತ ಮಂಗಳವಾರ (ಮೇ.3) ಈದುಲ್ ಫಿತ್ರ್ ಆಚರಣೆ ಆಚರಣೆ ಮಾಡಲಾಗುವುದು ಎಂದು ಹಿರಿಯ ವಿದ್ವಾಂಸರ ನೇತೃತ್ವದ ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ.
ದೇಶದ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಉಪವಾಸ ಆಚರಿಸಿ, ಮಂಗಳವಾರ (ಮೇ.3) ಈದುಲ್ ಫಿತ್ರ್ ಆಚರಿಸಲು ತೀರ್ಮಾನಿಸಲಾಗಿದೆ.
ಖಾಝಿಗಳಾದ ಸಮಸ್ತ ಕೇರಳ ಜಮೀಯತ್ ಉಲಮಾ ಅಧ್ಯಕ್ಷ ಸೈಯದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಪಾಣಕ್ಕಾಡ್ ಸೈಯದ್ ಸಾದಿಕ್ ಅಲಿ ಶಿಹಾಬ್ ತಂಙಳ್, ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್, ಕೋಝಿಕ್ಕೋಡ್ ಖಾಝಿಗಳಾದ ಸಯ್ಯಿದ್ ಮೊಹಮ್ಮದ್ ಕೋಯ ತಂಙಳ್ ಜಮಲುಲ್ಲಾಲಿ ಮತ್ತು ಸೈಯದ್ ನಾಸರ್ ಹಯ್ಯ್ ಶಿಹಾಬ್ ತಂಙಳ್ ಈ ಬಗ್ಗೆ ಮಾಹಿತಿ ನೀಡಿದರು.
ಚೆರಿಯ ಪೆರುನಾಳ್ ಹಬ್ಬವನ್ನು ಆಚರಿಸುವ ರಾಜ್ಯದ ಸರ್ಕಾರಿ ನೌಕರರ ಇಂದಿನ (02-05-2022) ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾಳೆಯ ರಜೆ ಬಗ್ಗೆ ಇಂದು ನಿರ್ಧರಿಸುವುದಾಗಿ ಸರ್ಕಾರ ಹೇಳಿದೆ.
ಇಂದು ಗಲ್ಫ್‍ನಲ್ಲಿ ರಂಜಾನ್‍ನ 30 ದಿನಗಳ ಅಂತ್ಯವನ್ನು ಆಚರಿಸಲಾಗುತ್ತದೆ. ಒಮಾನ್‍ನಲ್ಲಿ ಸೋಮವಾರ ಹಬ್ಬಾಚರಣೆ ನಡೆಯಲಿದೆ. ಇದು ತಿಂಗಳ ಆರಂಭವನ್ನು ಸೂಚಿಸುತ್ತದೆ.