ಒಡಿಶಾ :ಆಗ್ನೇಯ ಹಾಗೂ ನೆರೆಯ ಪಶ್ಚಿಮಮಧ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ಚಂಡಮಾರುತ ಅಸಾನಿ ಮೇ 10ರ ವರೆಗೆ ವಾಯುವ್ಯದತ್ತ ಸಾಗುವ ಸಾಧ್ಯತೆ ಇದೆ ಹಾಗೂ ಉತ್ತರ ಆಂಧ್ರಪ್ರದೇಶದ ವಾಯುವ್ಯ ಬಂಗಾಳಕೊಲ್ಲಿ ಹಾಗೂ ಒಡಿಶಾ ಕರಾವಳಿಗೆ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಕಾರ್ನಿಕೋಬಾರ್ (ನಿಕೋಬಾರ್ ದ್ವೀಪ)ನ ವಾಯುವ್ಯದಿಂದ ಸುಮಾರು 610 ಕಿ.ಮೀ. ದೂರದಲ್ಲಿರುವ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರವಿವಾರ ಸಂಜೆ 5 ಗಂಟೆಗೆ ಅಸಾನಿ ತೀವ್ರ ಚಂಡಮಾರುತವಾಗಿ ಪರಿವರ್ತಿತವಾಗಿತ್ತು. ಅಸಾನಿ ಚಂಡಮಾರುತ ಆಂಧ್ರ-ಒಡಿಸಾ ಕರಾವಳಿಯಲ್ಲಿ ಅಪ್ಪಳಿಸುವ ಸಾಧ್ಯತೆ ಇಲ್ಲ. ಬದಲಾಗಿ ಅದು 100 ಕಿ.ಮೀ. ದೂರದಿಂದ ಹಾದು ಹೋಗಲಿದೆ. ಒಡಿಶಾದ ಕರಾವಳಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ಮಂಗಳವಾರ ಸಂಜೆ ಲಘುವಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಜಪತಿ, ಗಂಜಾಮ್ ಹಾಗೂ ಪುರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು
ಹವಾಮಾನ ಇಲಾಖೆ ತಿಳಿಸಿದೆ. ಮೇ 10ರ ಸಂಜೆಯಿಂದ ಆಂಧ್ರಪ್ರದೇಶದ ಉತ್ತರ ಕರಾವಳಿಯ ಸಮೀಪದ ಪ್ರದೇಶಗಳ ಕೆಲವು ಸ್ಥಳಗಳಲ್ಲಿ ಲಘುವಿನಿಂದ ಕೂಡಿದ ಸಾದಾರಣ ಮಳೆಯಾಗಲಿದೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
ಮೇ 11ರಂದು ಉತ್ತರ ಆಂಧ್ರಪ್ರದೇಶ ಹಾಗೂ ಪಶ್ಚಿಮಬಂಗಾಳದ ಸಮೀಪದ ಕರಾವಳಿ ಪ್ರದೇಶ ಹಾಗೂ ಒಡಿಶಾ ಕರಾವಳಿಯ ಕೆಲವು ಸ್ಥಳಗಳಲ್ಲಿ ಲಘುವಿನಿಂದ ಕೂಡಿದ ಸಾಧಾರಣ ಮಳೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುರುವಾರ ಒಡಿಶಾ ಹಾಗೂ ಪಶ್ಚಿಮಬಂಗಾಳದ ಕರಾವಳಿ ಪ್ರದೇಶದ ಕೆಲವು ಸ್ಥಳಗಳಲ್ಲಿ ಲಘುವಿನಿಂದ ಕೂಡಿದ ಸಾದಾರಣ ಮಳೆ ಹಾಗೂ ಇನ್ನು ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.