HEALTH TIPS

ವಿಶ್ವದ 3ನೇ ಎತ್ತರದ ಪರ್ವತ ಕಾಂಚನ ಜುಂಗಾ ಏರುವಾಗಲೇ ಪ್ರಾಣಬಿಟ್ಟ ಪರ್ವತಾರೋಹಿ

        ಕಠ್ಮಂಡು: ಪ್ರಪಂಚದ ಮೂರನೇ ಅತಿ ಎತ್ತರ ಶಿಖರ ಏರುತ್ತಿರುವಾಗಲೇ ಭಾರತದ ಪರ್ವತಾರೋಹಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪರ್ವತ ನೆರೆಯ ದೇಶ ನೇಪಾಳಕ್ಕೆ ಸೇರಿದೆ.

          ಹಿಮಾಲಯ ಪರ್ವತವನ್ನು ಹೊಂದಿಕೊಂಡಿರುವ ಕಾಂಚನಜುಂಗಾ ಪರ್ವತ ಏರುವಾಗಲೇ ಪರ್ವತಾರೋಹಿ ನಾರಾಯಣ ಐಯ್ಯರ್​ (52) ಸಾವನ್ನಪ್ಪಿದ್ದು, ಈ ವರ್ಷ ಮೃತಪಟ್ಟ ಮೂವರು ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.

           8200 ಮೀಟರ್​ ಎತ್ತರವಿರುವ ಕಾಂಚನಜುಂಗಾ ಪರ್ವತವನ್ನು ಪರ್ವತಾರೋಹಿಗಳ ತಂಡ ಏರುತ್ತಿತ್ತು. ಮಾರ್ಗ ಮಧ್ಯದಲ್ಲೇ ಸುಸ್ತಾಗಿ ಬಿದ್ದ ನಾರಾಯಣ ಅಯ್ಯರ್​ ಅಲ್ಲೇ ಅಸುನೀಗಿದ್ದಾರೆ, ಇವರಿಗೆ ಇಬ್ಬರಿಂದ ಮಾರ್ಗದರ್ಶನ ನೀಡಲಾಗುತ್ತಿತ್ತು ಎಂದು ತಂಡದ ಪ್ರಮುಖ ನವೀಶ್​ ಕರ್ಕಿ ತಿಳಿಸಿದ್ದಾರೆ.

            ಸದ್ಯ ಅವರ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದು, ಪರ್ವತದಿಂದ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇನ್ನು ಈ ವರ್ಷ 68 ವಿದೇಶಿ ಪರ್ವತಾರೋಹಿಗಳಿಗೆ ಮಾತ್ರ ಪರ್ವತ ಏರಲು ನೇಪಾಳ ಸರ್ಕಾರ ಅನುಮತಿ ನೀಡಿತ್ತು ಎಂದು ಅವರು ಹೇಳಿದರು.

              ಹಿಮಾಲಯ ಪರ್ವತವನ್ನು ಹೊಂದಿಕೊಂಡಿರುವ ಕಾಂಚನಜುಂಗಾ ಪರ್ವತ ಏರುವಾಗಲೇ ಪರ್ವತಾರೋಹಿ ನಾರಾಯಣ ಐಯ್ಯರ್​ (52) ಸಾವನ್ನಪ್ಪಿದ್ದು, ಈ ವರ್ಷ ಮೃತಪಟ್ಟ ಮೂವರು ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries