ತಿರುವನಂತಪುರ: ಲವ್ ಜಿಹಾದ್ ನ ಕದಂಭ ಬಾಹುಗಳಿಂದ ತಾನು 40 ಹುಡುಗಿಯರನ್ನು ರಕ್ಷಿಸಿದ್ದೇನೆ ಎಂದು ಪಿಸಿ ಜಾರ್ಜ್ ಹೇಳಿದ್ದಾರೆ. ಲವ್ ಜಿಹಾದ್ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿದ ವ್ಯಕ್ತಿ ಎಂದು ಪಿಸಿ ಜಾರ್ಜ್ ಹೇಳಿಕೊಂಡಿರುವರು. ಕ್ರಿಶ್ಚಿಯನ್ ಅಸೋಸಿಯೇಷನ್ ಮತ್ತು ಅಲಯನ್ಸ್ ಫಾರ್ ಸೋಶಿಯಲ್ ಆಕ್ಷನ್ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಾ ಪಿಸಿ ಜಾರ್ಜ್ ಈ ವಿಷಯವನ್ನು ಬಹಿರಂಗಪಡಿಸಿದರು.
ರಾಜ್ಯದಲ್ಲಿ ಲವ್ ಜಿಹಾದ್ ಇದೆ. ಲವ್ ಜಿಹಾದ್ ನ ಬಲೆಯಿಂದ 40 ಹುಡುಗಿಯರನ್ನು ರಕ್ಷಿಸಲಾಗಿದೆ. ಇದು ತನ್ನ ಅನುಭವ. ರಾಜ್ಯದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 17 ಜನರಲ್ಲಿ ಇಬ್ಬರು ತಮ್ಮ ನೆರೆಹೊರೆಯವರು ಎಂದು ಪಿಸಿ ಜಾರ್ಜ್ ಹೇಳಿದ್ದಾರೆ. ಕೇರಳದಾದ್ಯಂತ ಓಡಾಡಿ ಹಿಂದೂ ಮಹಾಸಮ್ಮೇಳನದಲ್ಲಿ ಹೇಳಿದ್ದನ್ನು ಪ್ರಚಾರ ಮಾಡುವುದು ನನ್ನ ನಿರ್ಧಾರ ಎಂದು ಪಿಸಿ ಜಾರ್ಜ್ ಹೇಳಿದ್ದಾರೆ.
ಇದೇ ವೇಳೆ ಕಾಸಾ ನೀಡಿದ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಿ.ಸಿ.ಜಾರ್ಜ್ ಅವರಿಗೆ ಎಐವೈಎಫ್ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಿತು. ಜಾರ್ಜ್ ಅವರ ವಾಹನ ಶಾಸ್ತ್ರಿ ರಸ್ತೆಗೆ ಪ್ರವೇಶಿಸುತ್ತಿದ್ದಂತೆ, ಎಐವೈಎಫ್‍ನ ಗುಂಪೆÇಂದು ಅವರ ಬಳಿಗೆ ದೌಡಾಯಿಸಲು ಯತ್ನಿಸಿತು. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಪೋಲೀಸರು ಅವರನ್ನು ತಡೆದಾಗ ಮತ್ತೊಂದು ಗುಂಪು ಸಭಾಂಗಣದ ಮುಂಭಾಗದ ಗೇಟ್ ಬಳಿ ಬಂದು ಕಪ್ಪು ಬಾವುಟ ತೋರಿಸಿ ವಾಹನವನ್ನು ತಡೆಯಿತು.