ನವದೆಹಲಿ: ಕಳೆದ 2 ದಿನಗಳಲ್ಲಿ ದೆಹಲಿಯಲ್ಲಿ ಉಷ್ಣಹವೆ ತೀವ್ರಗೊಂಡಿದ್ದು, ಇನ್ನೂ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಂದು ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದ್ದು, 46-47 ಡಿಗ್ರಿ ತಲುಪುವ ಸಾಧ್ಯತೆ ಇದೆ ಎಂದು ಹೇಳಿದೆ.
ಸಫ್ತರ್ ಜಂಗ್ ವೀಕ್ಷಣಾಲಯದಲ್ಲಿ ಶುಕ್ರವಾರ 42.5 ಡಿಗ್ರಿಯಷ್ಟಿದ್ದ ತಾಪಮಾನ ಇಂದು 44 ಡಿಗ್ರಿಗೆ ಏರಿಕೆಯಾಗಿದೆ.
ಭಾನುವಾರದಂದು ದೆಹಲಿಯಲ್ಲಿ ತಾಪಮಾನ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ನ್ನು ನೀಡಲಾಗಿದೆ.
ಐಎಂಡಿ ತಾಪಮಾನಕ್ಕೆ ಸಂಬಂಧಿಸಿದಂತೆ ನಾಲ್ಕು ಕಲರ್ ಕೋಡ್ ಗಳನ್ನು ನೀಡುತ್ತದೆ ಹಸಿರು- (ಯಾವುದೇ ಕ್ರಮದ ಅಗತ್ಯವಿಲ್ಲ) ಹಳದಿ (ಗಮನಿಸುವುದು ಹಾಗೂ ಅಪ್ಡೇಟೆಡ್ ಅಗಿರುವುದು) ಆರೆಂಜ್ (ಸಿದ್ಧವಾಗಿರುವುದು) ರೆಡ್ (ಕ್ರಮ ಕೈಗೊಳ್ಳುವುದು) ಮೋಡ ಕವಿದ ವಾತಾವರಣ ಹಾಗೂ ಗುಡುಗು ಮುಂದಿನ ದಿನಗಳಲ್ಲಿ ತಾಪಮಾನವನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.