ಅಹಮದಾಬಾದ್: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದಾದ್ಯಂತ 4.07 ಕೋಟಿಗಿಂತ ಹೆಚ್ಚು ಮಹಿಳೆಯರು ಸ್ತನ ಕ್ಯಾನ್ಸರ್ ಪರೀಕ್ಷೆ, 3.16 ಕೋಟಿ ಮಂದಿ ಕುತ್ತಿಗೆಯ ಕ್ಯಾನ್ಸರ್ ಪರೀಕ್ಷೆಗೊಳಪಟ್ಟಿದ್ದಾರೆ ಎಂದು ಕೇಂದ್ರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದ್ದಾರೆ.

ಆರೋಗ್ಯ ಮತ್ತು ಫಾರ್ಮಾ ಉದ್ಯಮದಲ್ಲಿ ಸಬಲೀಕರಣದ ಉತ್ತುಂಗದ ಕುರಿತು ರಾಷ್ಟ್ರೀಯ ಸಮಾವೇಶದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, 'ಕಳೆದ 2 ವರ್ಷಗಳಲ್ಲಿ 45 ಕೋಟಿಗಿಂತ ಹೆಚ್ಚು ಮಹಿಳೆಯರು ತಮ್ಮ ಪ್ರಾಥಮಿಕ ಆರೋಗ್ಯ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ ಯೋಜನೆ ಅಡಿ ಆರಂಭಿಸಲಾದ ಆರೋಗ್ಯ ಮತ್ತು ಕ್ಷೇಮದ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.
ಅಲ್ಲದೆ, ಆರೋಗ್ಯ ಮತ್ತು ಫಾರ್ಮಾ ಕ್ಷೇತ್ರದಲ್ಲಿ ಮಹಿಳೆಯರ ಕುರಿತ ಪಕ್ಷಪಾತದ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ಈ ಕ್ಷೇತ್ರದಲ್ಲಿ ಕೇವಲ 11ರಷ್ಟು ಮಹಿಳೆಯರಿದ್ದಾರೆ. ಸೇಲ್ಸ್ ಮತ್ತು ಮಾರ್ಕೆಟ್‌ನಲ್ಲಿ ಶೇ 5ರಷ್ಟು, ಉತ್ಪಾದನೆ ವಲಯದಲ್ಲಿ ಶೇ 12 ಮತ್ತು ಕಾರ್ಪೊರೇಟ್ ಚಟುವಟಿಕೆಗಳಲ್ಲಿ ಶೇ 25ರಷ್ಟು ಮಹಿಳೆಯರಿದ್ದಾರೆ ಎಂದು ತಿಳಿಸಿದರು.