ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತವು 4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿಕೊಟ್ಟಿದೆ.
ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತವು 4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿಕೊಟ್ಟಿದೆ.
ಈ ಕುರಿತು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
'ಶ್ರೀಲಂಕಾಕ್ಕೆ ಇತ್ತೀಚಿನ ಕೊಡುಗೆಯಾಗಿ 4 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಅನ್ನು ಭಾರತವು ಕಳುಹಿಸಿಕೊಟ್ಟಿದೆ. ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ ನೀಡಿರುವ (ಲೈನ್ ಆಫ್ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಇಂಧನ ಕಳುಹಿಸಿಕೊಡಲಾಗಿದೆ' ಎಂದು ಹೈಕಮಿಷನ್ ಕಚೇರಿ ಟ್ವೀಟ್ ಮಾಡಿದೆ.
'ಪ್ರಜಾಸತ್ತಾತ್ಮಕವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ. ದ್ವೀಪ ರಾಷ್ಟ್ರದ ಜನರಿಗೆ ನವದೆಹಲಿಯ ಕಾಳಜಿ ಮತ್ತು ಬದ್ಧತೆ ಮುಂದುವರಿಯುತ್ತದೆ' ಎಂದು ಭಾರತೀಯ ಹೈಕಮಿಷನ್ ಗುರುವಾರ ತಿಳಿಸಿತ್ತು.