ನವದೆಹಲಿ: ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮಾಡಲಾದ ವಂಚನೆಯ ಪ್ರಕರಣಗಳು 2022ರ ಮಾರ್ಚ್‌ನಲ್ಲಿ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಶೇ.51 ಇಳಿಕೆ ದಾಖಲಿಸಿದೆ.
ಈ ಅವಧಿಯಲ್ಲಿ ಒಟ್ಟು 40,295.25 ಕೋಟಿ ರೂ. ಅನ್ನು ಬ್ಯಾಂಕ್‌ಗಳಿಗೆ ವಂಚಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.
ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಆರ್‌ಬಿಐ ಈ ಮಾಹಿತಿ ಕೊಟ್ಟಿದೆ.
2020-21ನೇ ಆರ್ಥಿಕ ವರ್ಷದಲ್ಲಿ 12 ಬ್ಯಾಂಕ್‌ಗಳು 81,924.54 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದವು. ಆ ವರ್ಷ 9,933 ಪ್ರಕರಣಗಳಿದ್ದವು. ಅದು 2021-22ನೇ ಆರ್ಥಿಕ ವರ್ಷದಲ್ಲಿ 7,940ಕ್ಕೆ ಇಳಿದಿದೆ ಎಂದು ತಿಳಿಸಿದೆ.
ಅತಿ ಹೆಚ್ಚು ವಂಚನೆ(9528 ಕೋಟಿ ರೂ.) ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ವರದಿಯಾಗಿದೆ.
ಹಾಗೆಯೇ ಎಸ್‌ಬಿಐನಲ್ಲಿ 6,932 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾದಲ್ಲಿ 5,924 ಕೋಟಿ ರೂ. ವಂಚನೆ ದಾಖಲಾಗಿದೆ ಎಂದು ತಿಳಿಸಲಾಗಿದೆ.: ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮಾಡಲಾದ ವಂಚನೆಯ ಪ್ರಕರಣಗಳು 2022ರ ಮಾರ್ಚ್‌ನಲ್ಲಿ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಶೇ.51 ಇಳಿಕೆ ದಾಖಲಿಸಿದೆ.
ಈ ಅವಧಿಯಲ್ಲಿ ಒಟ್ಟು 40,295.25 ಕೋಟಿ ರೂ. ಅನ್ನು ಬ್ಯಾಂಕ್‌ಗಳಿಗೆ ವಂಚಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.
ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಆರ್‌ಬಿಐ ಈ ಮಾಹಿತಿ ಕೊಟ್ಟಿದೆ.
2020-21ನೇ ಆರ್ಥಿಕ ವರ್ಷದಲ್ಲಿ 12 ಬ್ಯಾಂಕ್‌ಗಳು 81,924.54 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದವು. ಆ ವರ್ಷ 9,933 ಪ್ರಕರಣಗಳಿದ್ದವು. ಅದು 2021-22ನೇ ಆರ್ಥಿಕ ವರ್ಷದಲ್ಲಿ 7,940ಕ್ಕೆ ಇಳಿದಿದೆ ಎಂದು ತಿಳಿಸಿದೆ.
ಅತಿ ಹೆಚ್ಚು ವಂಚನೆ(9528 ಕೋಟಿ ರೂ.) ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ವರದಿಯಾಗಿದೆ.
ಹಾಗೆಯೇ ಎಸ್‌ಬಿಐನಲ್ಲಿ 6,932 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾದಲ್ಲಿ 5,924 ಕೋಟಿ ರೂ. ವಂಚನೆ ದಾಖಲಾಗಿದೆ ಎಂದು ತಿಳಿಸಲಾಗಿದೆ.