ನವದೆಹಲಿ: ರಕ್ಷಣಾ ಇಲಖೆಯ 58,275 ಪಿಂಚಣಿದಾರರ ಗುರುತನ್ನು ಬ್ಯಾಂಕ್ ಗಳು ದೃಢೀಕರಿಸದೇ ಇರುವ ಪರಿಣಾಮ ಪಿಂಚಣಿ ವಿಳಂಬವಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ (ಮೇ.04 ರಂದು) ತಿಳಿಸಿದೆ.
ಬ್ಯಾಂಕ್ ಗಳು ಏ.30 ರ ವೇಳೆಗೆ ಬ್ಯಾಂಕ್ ಗಳು 58,275 ಪಿಂಚಣಿದಾರರ ಗುರುತನ್ನು ದೃಢೀಕರಿಸಬೇಕಿತ್ತು.
ಗೊಂದಲಗಳನ್ನು ನಿವಾರಿಸಲು ಮೇ.25 ವರೆಗೆ ದೃಢೀಕರಣ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಏಪ್ರಿಲ್ ತಿಂಗಳ ಪಿಂಚಣಿಯನ್ನು ದಿನಾಂತ್ಯಕ್ಕೆ ಖಾತೆಗೆ ಹಾಕಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪಿಂಚಣಿ ಬ್ಯಾಂಕ್ ಖಾತೆಗೆ ಜಮಾ ಆಗುವುದು ತಡ ಆಗಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ನವೆಂಬರ್ ತಿಂಗಳಲ್ಲಿ ಬ್ಯಾಂಕ್ ಗಳು ಪಿಂಚಣಿದಾರರ ವಾರ್ಷಿಕ ಗುರುತು ದೃಢೀಕರಣ ನಡೆಸುತ್ತದೆ. ಆದರೆ ಕೋವಿಡ್-19 ಕಾರಣದಿಂದಾಗಿ ಕಳೆದ ವರ್ಷ ಈ ಪ್ರಕ್ರಿಯೆ ನಡೆದಿರಲಿಲ್ಲ. ಸರ್ಕಾರ ಗುರುತು ದೃಢೀಕರಣವನ್ನು 2021 ರ ನವೆಂಬರ್ ನಿಂದ ಮಾರ್ಚ್ 31, 2022 ವರೆಗೆ ವಿಸ್ತರಿಸಿತ್ತು.
ಎಂಒಡಿ ಎಸ್ ಪಿಎಆರ್ ಎಸ್ ಹೆಚ್ ನ ಮಾಹಿತಿಯ ಪ್ರಕಾರ ಆನ್ ಲೈನ್ ಪಿಂಚಣಿ ವಿತರಣೆ ವ್ಯವಸ್ಥೆಯ ಮೂಲಕ ಮಾಸಿಕ 5 ಲಕ್ಷ ಪಿಂಚಣಿದಾರರ ಖಾತೆಗೆ ಯಶಸ್ವಿಯಾಗಿ ಪಿಂಚಣಿ ಹಾಕಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.