ವಡೋದರಾ: ದಕ್ಷಿಣ ಆಫ್ರಿಕಾದಿಂದ ಗುಜರಾತ್‌ನ ವಡೋದರಾಗೆ ಆಗಮಿಸಿದ್ದ 29 ವರ್ಷದ ಎನ್‌ಆರ್‌ಐ ಒಬ್ಬರಿಗೆ ಕೋವಿಡ್‌ನ ರೂಪಾಂತರಿ ಓಮೈಕ್ರಾನ್ ಉಪತಳಿ ಬಿಎ.5 ಸೋಂಕು ದೃಢಪಟ್ಟಿದೆ ಎಂದು ಮಂಗಳವಾರ ಇಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದರು.
ವಡೋದರಾ: ದಕ್ಷಿಣ ಆಫ್ರಿಕಾದಿಂದ ಗುಜರಾತ್‌ನ ವಡೋದರಾಗೆ ಆಗಮಿಸಿದ್ದ 29 ವರ್ಷದ ಎನ್‌ಆರ್‌ಐ ಒಬ್ಬರಿಗೆ ಕೋವಿಡ್‌ನ ರೂಪಾಂತರಿ ಓಮೈಕ್ರಾನ್ ಉಪತಳಿ ಬಿಎ.5 ಸೋಂಕು ದೃಢಪಟ್ಟಿದೆ ಎಂದು ಮಂಗಳವಾರ ಇಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದರು.
ಇಲ್ಲಿಗೆ ಆಗಮಿಸುವ ಮುನ್ನವೇ ಆ ವಕ್ತಿಗೆ ಮೇ 1ರಂದು ಕೊರೊನಾ ದೃಢಪಟ್ಟಿತ್ತು.
ಸೋಂಕಿತ ವ್ಯಕ್ತಿಯಲ್ಲಿ ಯಾವ ಲಕ್ಷಣಗಳು ಇಲ್ಲ. ಅವರ ತಂದೆ-ತಾಯಿ ಮಾತ್ರ ಸಂಪರ್ಕದಲ್ಲಿದ್ದರು. ಅವರಿಗೆ ನೆಗಟಿವ್ ಬಂದಿದೆ ಎಂದು ಹೇಳಿದರು.
ಓಮೈಕ್ರಾನ್ ಉಪ ತಳಿಗಳಾದ ಬಿಎ.4 ಮತ್ತು ಬಿಎ.5 ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಭಾನುವಾರ ತಮಿಳುನಾಡು ಮತ್ತು ತೆಲಂಗಾಣದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಜಗತ್ತಿನಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ವರದಿಯಾಗಿತ್ತು. ಬಳಿಕ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.