ಬೆಂಗಳೂರು: ಬೆಂಗಳೂರು ಮೂಲದ ಮಿಡ್-ಕ್ಯಾಪ್ ಮಾಹಿತಿ ತಂತ್ರಜ್ಞಾನ ಕಂಪನಿ ಮೈಂಡ್ ಟ್ರೀ ಹಾಗೂ ಎಂಜಿನಿಯರಿಂಗ್ ದಿಗ್ಗಜ ಎಲ್&ಟಿ ವಿಲೀನವಾಗಿದ್ದು, ವಿಲೀನವಾದ ಘಟಕಕ್ಕೆ ಎಲ್ ಟಿಐ ಮೈಂಡ್ ಟ್ರೀ ಎಂದು ಕರೆಯಲಾಗಿದೆ.
ಎಲ್&ಟಿ ಮತ್ತು ಮೈಂಡ್ ಟ್ರೀ ವಿಲೀನವಾಗುವ ಮೂಲಕ ಟಿಸಿಎಸ್, ಇನ್ಫೋಸಿಸ್, ಎಚ್ ಸಿಎಲ್ ಮತ್ತು ವಿಪ್ರೋ ನಂತರ ದೇಶದ ಐದನೇ ಅತಿ ದೊಡ್ಡ ಐಟಿ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಎಲ್ ಟಿಐ ಮೈಂಡ್ ಟ್ರೀ 1.68 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಮಾರ್ಪಟ್ಟಿದೆ.
“ಈ ವಿಲೀನವು ನಮ್ಮ ಕಾರ್ಯತಂತ್ರದ ದೃಷ್ಟಿಗೆ ಅನುಗುಣವಾಗಿ ಐಟಿ ಸೇವೆಗಳ ವ್ಯವಹಾರವನ್ನು ಬೆಳೆಸುವ ನಮ್ಮ ನಿರಂತರ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಎಲ್ ಟಿಐ ಮತ್ತು ಮೈಂಡ್ ಟ್ರೀಯ ಹೆಚ್ಚು ಪೂರಕವಾದ ವ್ಯವಹಾರಗಳು ಈ ಏಕೀಕರಣ ನಮ್ಮ ಗ್ರಾಹಕರು, ಹೂಡಿಕೆದಾರರು, ಷೇರುದಾರರು ಮತ್ತು ಉದ್ಯೋಗಿಗಳಿಗೆ 'ಗೆಲುವಿನ' ವಿಶ್ವಾಸ ಮೂಡಿಸಲಿದೆ ಎಂದು ಎಲ್‌ಟಿಐ ಅಧ್ಯಕ್ಷ ಎ ಎಂ ನಾಯಕ್ ಅವರು ಹೇಳಿದ್ದಾರೆ.
ಎಲ್&ಟಿ ಕಂಪನಿಯು 2019ರಲ್ಲಿ ಮೈಂಡ್ ಟ್ರೀ ಕಂಪನಿಯನ್ನು ಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತು. ವಿಲೀನದಿಂದ ಸೃಷ್ಟಿಯಾದ ಹೊಸ ಕಂಪನಿಯಲ್ಲಿ ಮೈಂಡ್ ಟ್ರೀ ಶೇ. 61 ರಷ್ಟು ಷೇರುಗಳನ್ನು ಮತ್ತು ಎಲ್&ಟಿ ಶೇ. 74 ರಷ್ಟು ಷೇರುಗಳನ್ನು ಹೊಂದಿರಲಿದೆ.