HEALTH TIPS

ತಂಬಾಕು ವ್ಯಸನದಲ್ಲೂ ಮಹಿಳೆಯರದ್ದೇ ಮೇಲುಗೈ : 6 ಸೆಕೆಂಡಿಗೆ ಒಬ್ಬರು, ವರ್ಷಕ್ಕೆ 10 ಲಕ್ಷ ಜನರು ಬಲಿ : ಸಮೀಕ್ಷೆ

                  ನವದೆಹಲಿ:ನಿನ್ನೆ ವಿಶ್ವ ತಂಬಾಕು ರಹಿತ ದಿನ. ಈ ವರ್ಷ ತಂಬಾಕಿನಿಂದ ಪರಿಸರ ಉಳಿಸಿ ಎಂಬ ಘೋಷಾ ವಾಕ್ಯದೊಂದಗೆ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ರಹಿತ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ತಂಬಾಕು ಸೇವನೆಗೆ ಯುವಕರಿಂದ ಹಿಡಿದು ಎಲ್ಲ ವಯಸ್ಸಿನವರು ಸಹ ಬಲಿಯಾಗುತ್ತಿದ್ದಾರೆ.

ಅಷ್ಟೇ ಅಲ್ಲದೆ, ತಂಬಾಕು ಬೆಳೆಯಿಂದಲೂ ಪರಿಸರ ನಾಶವಾಗುತ್ತಿದೆ.

            ಹೀಗಾಗಿ ತಂಬಾಕು ಸೇವನೆ ಹಾಗೂ ತಂಬಾಕು ಉತ್ಪಾದನೆ ಎರಡೂ ಅಪಾಯಕಾರಿ. ಇತರ ರಾಷ್ಟ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಧೂಮಪಾನ ಹಾಗೂ ಇತರ ತಂಬಾಕು ಸೇವಿಸುವವರ ಸಂಖ್ಯೆ ಕುಸಿತ ಕಾಣುತ್ತಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡು ಬರುತ್ತಿದೆ. ಅದರಲ್ಲೂ ಯುವಕರೇ ಈ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರಾದೃಷ್ಟಕರ. ಧೂಮಪಾನ ಸೇವನೆಯಿಂದಾಗುವ ಆರೋಗ್ಯ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಫೋರ್ಟಿಸ್‌ ಆಸ್ಪತ್ರೆ ಶ್ವಾಸಕೋಶ ಸಲಹೆಗಾರ ಡಾ. ಮಜೀದ್‌ ಪಾಷಾ ವಿವರಿಸಿದ್ದಾರೆ.

             ಸಾವಿನ ಸಂಖ್ಯೆ ಏರಿಕೆ: ಇತ್ತೀಚಿನ ಜಾಗತಿಕ ಯುವ ತಂಬಾಕು ಸಮೀಕ್ಷೆಯ ಪ್ರಕಾರ, 1/5 ಭಾರತೀಯ ಹದಿಹರೆಯದವರು (13 - 15 ವರ್ಷ ವಯಸ್ಸಿನವರು) ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಶೇ. 38ರಷ್ಟು ಯುವಜನತೆ ಧೂಮಪಾನಕ್ಕೆ ದಾಸರಾಗಿದ್ದಾರೆ. ಶೇ. 47ರಷ್ಟು ಮಂದಿ ಬೀಡಿ ಸೇವನೆ ಮಾಡುತ್ತಿದ್ದರೆ, ಶೇ. 52ರಷ್ಟು ಜನ ಹೊಗೆರಹಿತ ತಂಬಾಕು ಬಳಸುತ್ತಿದ್ದಾರೆ. ಅವರಲ್ಲಿ ಅನೇಕರು ತಂಬಾಕು ಸೇವನೆಯನ್ನು ಚಿಕ್ಕವಯಸ್ಸಿನಿಂದಲೇ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ತಂಬಾಕು ವ್ಯಸನದಿಂದ 6 ಸೆಕೆಂಡಿಗೆ ಒಬ್ಬರು ಮೃತಪಡುತ್ತಿದ್ದು, ವರ್ಷಕ್ಕೆ 10 ಲಕ್ಷ ಜನರು ತಂಬಾಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

           ಮಹಿಳೆಯರದ್ದೇ ಮೇಲುಗೈ: ಪುರುಷರು ಮಾತ್ರ ತಂಬಾಕು ಸೇವನೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಇದು ಸುಳ್ಳು, ಪುರುಷರಷ್ಟೇ ಸಮಾನವಾಗಿ ಮಹಿಳೆಯರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರು ಪಾನ್ ಮತ್ತು ಇತರ ಉತ್ಪನ್ನಗಳ ರೂಪದಲ್ಲಿ ಹೆಚ್ಚು ತಂಬಾಕನ್ನು ಸೇವಿಸುತ್ತಾರೆ.

                ನಗರ ಪ್ರದೇಶದ ಪ್ರೇಕ್ಷಕರ ವಿಷಯದಲ್ಲಿ, ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಮಹಿಳೆಯರು ಪಾನ್ ಮಸಾಲಾ ಉತ್ಪನ್ನಗಳು, ಸಿಗರೇಟ್ ಮತ್ತು ಹುಕ್ಕಾ ಮುಂತಾದ ಜೀವನಶೈಲಿ ಅಭ್ಯಾಸಗಳ ಮೂಲಕ ತಂಬಾಕಿಗೆ ಬಲಿಯಾಗುತ್ತಾರೆ. ಈ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ ಅಂತಾರೆ ಡಾ. ಮಜೀದ್‌ ಪಾಷಾ.

                  ಧೂಮಪಾನ ಹೊಗೆಯಿಂದ ಪಕ್ಕದವರಿಗೆ ಹಾನಿ: ಮತ್ತೊಂದು ಸಂಗತಿ ಎಂದರೆ, ಧೂಮಪಾನ ಮಾಡುವವರ ಜೊತೆಗೆ ಅವರ ಪಕ್ಕದಲ್ಲಿ ನಿಲ್ಲುವ ಜನರಿಗೂ ಹಾನಿ ಎನ್ನುವುದು ಅಧ್ಯಯನ ಮೂಲಕ ದೃಢಪಟ್ಟಿದೆ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದಕ್ಕೆ ನಿಷೇಧವಿದೆ. ಧೂಮಪಾನದ ಹೊಗೆ ಶ್ವಾಸಕೋಶವನ್ನು ಸಂಪೂರ್ಣ ಹಾನಿ ಮಾಡುವ ಜೊತೆಗೆ, ಇತರ ಆರೋಗ್ಯ ಹಾಗೂ ಕ್ಯಾನ್ಸರ್‌ಕಾರಕ ಸಮಸ್ಯೆಗೆ ಕಾರಣವಾಗಲಿದೆ. ಇದು ಧೂಮಪಾನ ಸೇವನೆಯಿಂದ ಮಾತ್ರವಲ್ಲ, ಆ ಹೊಗೆ ಕುಡಿಯುವ ಜನರ ಆರೋಗ್ಯದ ಮೇಲೂ ಈ ಪರಿಣಾಮ ಬೀರಲಿದೆ.

ಜಾಗೃತಿ ಅವಶ್ಯಕ: ಪ್ರತಿ ವರ್ಷ ತಂಬಾಕು ಸೇವನೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ಇದು ಮಕ್ಕಳಿಂದ ಶುರುವಾಗಬೇಕಿದೆ. ಟೀನೇಜ್‌ಗೆ ಬರುವ ಮಕ್ಕಳಿಗೆ ಸುತ್ತಮುತ್ತಲಿನ ಕೆಟ್ಟಚಟಗಳು ಆಕರ್ಷಿಸಲಿದೆ. ಹೀಗಾಗಿ, ಮಕ್ಕಳಿಗೆ ಶಾಲೆಯಲ್ಲಿಯೇ ತಂಬಾಕಿನ ಬಗ್ಗೆ ಜಾಗೃತಿ ಮೂಡಿಸುವ ಪಠ್ಯದ ಅವಶ್ಯಕತೆ ಇದೆ ಅಂತ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries