ನವದೆಹಲಿ: ಕೋವಿಡ್-19 ಲಸಿಕೆಯ ಎರಡೂ ಡೋಸ್ ಗಳನ್ನು ಭಾರತದ ಶೇ.60 ರಷ್ಟು ಯುವಕರಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ತಿಳಿಸಿದ್ದಾರೆ.
15-18 ವರ್ಷದ ಶೇ.60 ರಷ್ಟು ಯುವಜನತೆಗೆ ಪೂರ್ಣಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಅತ್ಯುತ್ತಮ ಕೆಲಸ ಯುವಭಾರತ! ಎಂದು ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದು ಕೋವಿಡ್ ಯುದ್ಧವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಈ ವಯಸ್ಸಿನ ವಿಭಾಗದಲ್ಲಿ ಕೋವಿಡ್-19 ನ ಮೊದಲ ಡೋಸ್ ಲಸಿಕೆಯನ್ನು 5,91,09,660 ಮಂದಿಗೆ ನೀಡಲಾಗಿದ್ದು, 4,45,34,980 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ಅಭಿಯಾನ ಪ್ರಾರಂಭವಾದಾಗಿನಿಂದ ನೀಡಲಾಗಿದೆ.
12-14 ವರ್ಷದ ಮಕ್ಕಳ ಪೈಕಿ 3,24,75,018 ಮಂದಿಗೆ ಮೊದಲ ಡೊಸ್ ಲಸಿಕೆಯನ್ನು ನೀಡಲಾಗಿದೆ. 1,33,64,363 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.