HEALTH TIPS

62ನೇ ವಯಸ್ಸಿನಲ್ಲಿ ಪಿಹೆಚ್ ಡಿ ಪಡೆದ ಕೇರಳದ ಮ್ಯಾನೇಜ್ಮೆಂಟ್ ಶಿಕ್ಷಕ; ಘಟಿಕೋತ್ಸವದಲ್ಲಿ ತಂದೆ-ಮಗ ಒಟ್ಟಿಗೆ ಭಾಗಿ!

             ತಿರುವನಂತಪುರ: ಹೆಚ್ಚಿನ ಜನರು ನಿವೃತ್ತಿ ಜೀವನಕ್ಕೆ ಆದ್ಯತೆ ನೀಡುವ ವಯಸ್ಸಿನಲ್ಲಿ ಪಿಎಚ್‌ಡಿ ಗಳಿಸುವುದು ಸಾಮಾನ್ಯ ಸಾಧನೆಯಲ್ಲ. 62ರ ಹರೆಯದ ಹರೀಂದ್ರಕುಮಾರ್ ವಿ ಆರ್ ಅವರು ತಮ್ಮ ಪುತ್ರ ಅಮಲ್ ಜಿಷ್ಣು ಎಂಬಿಎ ಪದವಿ ಪಡೆದ ದಿನವೇ ಅದೇ ಸ್ಥಳದಲ್ಲಿ ಸನ್ಮಾನ ಸ್ವೀಕರಿಸಿದಾಗ ಸಂತೋಷ ಇಮ್ಮಡಿಯಾಯಿತು. 

              ಕಳೆದ ಬುಧವಾರ ನಡೆದ ತಿರುವನಂತಪುರದ ಕಾಲೇಜ್ ಆಫ್ ಇಂಜಿನಿಯರಿಂಗ್, (CET) ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ 2019 ರ ಬ್ಯಾಚ್‌ನ ಘಟಿಕೋತ್ಸವದಲ್ಲಿ ಗೌನ್ ಗಳನ್ನು ತೊಟ್ಟು ಪರಸ್ಪರ ಶುಭಾಶಯ ಕೋರಿ ಫೋಟೋ ತೆಗೆಸಿಕೊಂಡಿದ್ದು ಒಂದು ಅಭೂತಪೂರ್ವ ಅತ್ಯಪೂರ್ವ ಘಟನೆಗೆ ಸಾಕ್ಷಿಯಾಯಿತು.

               ಹರೀಂದ್ರಕುಮಾರ್ ಅವರಿಗೆ, ಶಿಕ್ಷಕರಾಗುವ ಅವರ ಸುದೀರ್ಘ ಪ್ರಯಾಣದಲ್ಲಿ ಪಿಎಚ್‌ಡಿ ಪದವಿ ಒಂದು ಪ್ರಮುಖ ಮೈಲಿಗಲ್ಲು, ತಮ್ಮ ಕೊನೆಯ ಉಸಿರು ಇರುವವರೆಗೂ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹರೀಂದ್ರಕುಮಾರ್ ಕೆಲ್ಟ್ರಾನ್‌ನಲ್ಲಿ ಅಂಗಡಿ ಸಹಾಯಕನ ಕೆಲಸ ತೆಗೆದುಕೊಂಡಾಗ ಅವರಿಗಿನ್ನೂ 20 ವರ್ಷ. ಆದಾಗ್ಯೂ, ಕೆಲಸದ ಜೊತೆಗೆ ತನ್ನ ಶೈಕ್ಷಣಿಕ ಆಸಕ್ತಿಗಳನ್ನು ಮುಂದುವರಿಸಲು ತೀವ್ರ ಆಸಕ್ತಿಯಿತ್ತು.

           ಕೆಲಸ ಮಾಡುವಾಗ, ಎಂಬಿಎ ವ್ಯಾಸಂಗ ಮಾಡಿದೆ. ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಪದವಿ (ಪ್ರಥಮ ದರ್ಜೆ) ಗಳಿಸಿದೆ. ನನ್ನ ಮುಂದಿನ ಗುರಿ ಯುಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (ನೆಟ್) ತೇರ್ಗಡೆಗೊಳಿಸುವುದಾಗಿತ್ತು. ನಾನು ಮ್ಯಾನೇಜ್‌ಮೆಂಟ್ ಮತ್ತು ಎಚ್‌ಆರ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್ಸ್ ಎರಡರಲ್ಲೂ NET ಪರೀಕ್ಷೆಯನ್ನು ತೇರ್ಗಡೆ ಮಾಡಿಕೊಂಡೆ ಎಂದರು. 25 ವರ್ಷಗಳ ಕೈಗಾರಿಕಾ ಅನುಭವ ಹೊಂದಿರುವ ವ್ಯಕ್ತಿ ನಂತರ ಮ್ಯಾನೇಜ್‌ಮೆಂಟ್ ಅಧ್ಯಯನದಲ್ಲಿ ಪಿಎಚ್‌ಡಿ ಪಡೆಯುವತ್ತ ಚಿತ್ತ ಹರಿಸಿದರು. 

                2015 ರಲ್ಲಿ CET ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ಗೆ ಸೇರಿಕೊಂಡರು. ನಾಲ್ಕು ವರ್ಷಗಳ ನಂತರ, ಕೇರಳ ವಿಶ್ವವಿದ್ಯಾಲಯವು ಅವರಿಗೆ ಪದವಿಯನ್ನು ನೀಡಿದಾಗ ತಮ್ಮ ಕನಸನ್ನು ನನಸಾಗಿಸಿದರು. ದತ್ತಾಂಶ ವಿಜ್ಞಾನ, ದತ್ತಾಂಶ ವಿಶ್ಲೇಷಣೆ ಮತ್ತು ಸಂಶೋಧನಾ ವಿಧಾನದಲ್ಲಿ ಹೆಚ್ಚುವರಿ ಅರ್ಹತೆಗಳನ್ನು ಪಡೆದಿದ್ದಾರೆ.

                ಹರೀಂದ್ರಕುಮಾರ್ ಅವರು ಈಗ ಎಂಟು ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದಾರೆ. ಸಿಇಟಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಕೇರಳದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಅಧ್ಯಾಪಕರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಸಹ ಪ್ರಕಟಿಸಿದ್ದಾರೆ. ಅವರ ಪತ್ನಿ ಮೀರಾ ವಿ ಡಿ ಅವರು ನಿವೃತ್ತ ಸಂಗೀತ ಶಿಕ್ಷಕಿಯಾಗಿದ್ದು, ಹಿರಿಯ ಮಗ ಅಖಿಲ್ ವಿಷ್ಣು ಲಂಡನ್‌ನಲ್ಲಿ ಸಂಗೀತ ಕೋರ್ಸ್ ನ್ನು ಮುಂದುವರಿಸುತ್ತಿದ್ದಾರೆ. 

                ಅಮಲ್ ಅವರ ಕಿರಿಯ ಮಗ ಈಗ CET ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಕ್ಯಾಂಪಸ್ ಆಯ್ಕೆಯಾಗಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆಯ ಹಾದಿಯಲ್ಲಿಯೇ ಸಾಗಲು ಇಚ್ಛಿಸುತ್ತಿದ್ದು, ಶೀಘ್ರದಲ್ಲೇ ಮ್ಯಾನೇಜ್‌ಮೆಂಟ್ ಅಧ್ಯಯನದಲ್ಲಿ ಸಂಶೋಧನೆಯನ್ನು ಮುಂದುವರಿಸಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries