ಕೊಟ್ಟಾಯಂ: ಶ್ವಾನ ಸಾಕಣೆ ಕೇಂದ್ರದ ನೆಪದಲ್ಲಿ ಗಾಂಜಾ ವ್ಯಾಪಾರ ನಡೆಸುವ ವಿದ್ಯಮಾನ ಬೆಳಕಿಗೆ ಬಂದಿದೆ. ತಿಕ್ಕೋಯ ಮಂಗಳಗಿರಿಯ 30 ಎಕರೆ ಪ್ರದೇಶದಲ್ಲಿನ ಜನನಿಬಿಡ ಪ್ರದೇಶದಲ್ಲಿ ಪ್ರತ್ಯೇಕ ಮನೆಯಲ್ಲಿ ಗಾಂಜಾ ಕೇಂದ್ರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಲ್ಲಿಂದ ಆರೂವರೆ ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಖ್ಯರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ರಬ್ಬರ್ ತೋಟದ ಮಧ್ಯದಲ್ಲಿರುವ ಚಿಕ್ಕ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿತ್ತು. ಶ್ವಾನ ಸಾಕಣೆ ಮತ್ತು ಮಾರಾಟ ಎಂದು ಹೇಳಲಾಗಿದ್ದರೂ ರಾತ್ರಿ ವೇಳೆ ವಾಹನಗಳು ಬಂದು ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಗಾಂಜಾವನ್ನು ಮೂವರು ಮಾರಾಟ ಮಾಡುತ್ತಿದ್ದರು. ಆದರೆ ಪೊಲೀಸರು ಪರಿಶೀಲಿಸಲು ಬಂದಾಗ ಇಬ್ಬರು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಅವರ ಸಹಾಯಕನನ್ನು ಬಂಧಿಸಲಾಯಿತು.