HEALTH TIPS

ರಾಜ್ಯಾದ್ಯಂತ 6,566 ಕೆಜಿ ಹಳಸಿದ ಮೀನು ನಾಶಪಡಿಸಿದ ಆಹಾರ ಇಲಾಖೆ: ಜ್ಯೂಸ್ ಅಂಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ

              ತಿರುವನಂತಪುರ: ‘ಉತ್ತಮ ಆಹಾರ ರಾಜ್ಯದ ಹಕ್ಕು’ ಅಭಿಯಾನದ ಅಂಗವಾಗಿ ಆಹಾರ ಭದ್ರತಾ ಇಲಾಖೆ ನಿನ್ನೆ ರಾಜ್ಯಾದ್ಯಂತ  124 ತಪಾಸಣೆಗಳನ್ನು ನಡೆಸಿತು. ಪರವಾನಗಿ ಅಥವಾ ನೋಂದಣಿ ಮಾಡದ 7 ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 28 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 9 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

                 ಕಳೆದ 13 ದಿನಗಳಲ್ಲಿ ರಾಜ್ಯಾದ್ಯಂತ 2,981 ತಪಾಸಣೆ ನಡೆಸಲಾಗಿದೆ. ಪರವಾನಗಿ ಅಥವಾ ನೋಂದಣಿ ಮಾಡದ 270 ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 990 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. 368 ಕಿಲೋಗ್ರಾಂಗಳಷ್ಟು ಕಳಪೆ ಮಾಂಸವನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. 221 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜ್ಯೂಸ್ ಅಂಗಡಿಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಒಟ್ಟು 445 ಜ್ಯೂಸ್ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿದೆ. 65 ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

               ಆಪರೇಷನ್ ಫಿಶ್‍ನ ಭಾಗವಾಗಿ, ಇದುವರೆಗೆ 6,566 ಕಿಲೋಗ್ರಾಂಗಳಷ್ಟು ಹಳೆಯ ಮತ್ತು ರಾಸಾಯನಿಕವಾಗಿ ಕಲುಷಿತಗೊಂಡ ಮೀನುಗಳನ್ನು ನಾಶಪಡಿಸಲಾಗಿದೆ. ಈ ಅವಧಿಯಲ್ಲಿ 4,404 ಪರೀಕ್ಷೆಗಳಲ್ಲಿ 2,362 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 93 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬೆಲ್ಲದ ಕಲಬೆರಕೆ ಪತ್ತೆ ಹಚ್ಚಲು ಆರಂಭಿಸಿರುವ ಆಪರೇಷನ್ ಬೆಲ್ಲ  ಭಾಗವಾಗಿ 609 ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಗಿದೆ. 148 ಕಣ್ಗಾವಲು ಮಾದರಿಗಳನ್ನು ಸಂಗ್ರಹಿಸಲಾಗಿದೆ. ತಪಾಸಣೆ ಮುಂದುವರಿದಿದೆ ಎಂದು ಸಚಿವೆ ವೀಣಾ ಜಾರ್ಜ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries