ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಕೊಲಿಜಿಯಂ ದೇಶದ ವಿವಿಧ ಹೈಕೋರ್ಟ್ಗಳ ಆರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್ನಿಂದ ಪಾಟ್ನಾ ಹೈಕೋರ್ಟ್ಗೆ, ಒರಿಸ್ಸಾದಿಂದ ಕಲ್ಕತ್ತಾಗೆ ನ್ಯಾ. ಚಿತ್ತ ರಂಜನ್ ದಾಶ್; ತ್ರಿಪುರಾದಿಂದ ಒಡಿಶಾಗೆ ನ್ಯಾಯಮೂರ್ತಿ ಸುಭಾಸಿಸ್ ತಲಪಾತ್ರ; ಮಣಿಪುರದಿಂದ ಗೌಹಾಟಿಗೆ ನ್ಯಾಯಮೂರ್ತಿ ಲನುಸುಂಗ್ಕುಮ್ ಜಮೀರ್; ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ನಿಂದ ಬಾಂಬೆ ಹೈಕೋರ್ಟ್ಗೆ; ಮತ್ತು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಮಧ್ಯಪ್ರದೇಶದಿಂದ ದೆಹಲಿಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ.