HEALTH TIPS

ಪೌರತ್ವ ತ್ಯಜಿಸಿದ 7,50,000 ಭಾರತೀಯರು

        2016 ರಿಂದೀಚೆಗೆ 7.50 ಲಕ್ಷ ಭಾರತೀಯರು ವೈಯಕ್ತಿಕ ಕಾರಣ ಪೌರತ್ವ ತ್ಯಜಿಸಿ 106 ಅನ್ಯ ದೇಶಗಳಿಗೆ ತೆರಳಿದ್ದಾರೆ. ಇದೇ ಅವಧಿಯಲ್ಲಿ 6,000 ವಿದೇಶೀಯರು ಭಾರತದ ಪೌರತ್ವ ಸ್ವೀಕರಿಸಿದ್ದಾರೆ.


* 2016-2021ರ ನಡುವೆ 7,49,765 ಭಾರತೀಯರು ಪೌರತ್ವ ತ್ಯಜಿಸಿದ್ದಾರೆ.

ಇದರಲ್ಲಿ 2019ರಲ್ಲಿ ಗರಿಷ್ಠ 1.44 ಲಕ್ಷ, 2016ರಲ್ಲಿ ಎರಡನೇ ಗರಿಷ್ಠ 1.41 ಲಕ್ಷ ಭಾರತೀಯರು ಪೌರತ್ವ ತ್ಯಜಿಸಿದ್ದರು. 2020ರಲ್ಲಿ ಈ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗಿತ್ತು.

* ಭಾರತದಿಂದ 2017ರಿಂದೀಚೆಗೆ ಪೌರತ್ವ ತ್ಯಜಿಸಿ ಹೋದವರಲ್ಲಿ ಬಹುಪಾಲು ತೆರಳಿದ್ದು ಅಮೆರಿಕ, ಕೆನಡಾ, ಆಸ್ಟ್ರೆಲಿಯಾ ಮತ್ತು ಇಂಗ್ಲೆಂಡ್​ಗೆ. ಇವರ ಪಾಲು ಶೇಕಡ 82.

ಚೀನಾ, ಲಂಕಾಗೂ ತೆರಳಿದ್ದಾರೆ!
ಭಾರತದಿಂದ 2017 ಮತ್ತು 2021ರ ನಡುವೆ ಭಾರತದ ಪೌರತ್ವ ತ್ಯಜಿಸಿ 2,174 ಭಾರತೀಯರು ಚೀನಾಕ್ಕೆ ತೆರಳಿದ್ದಾರೆ. ಇದೇ ಅವಧಿಯಲ್ಲಿ ಶ್ರೀಲಂಕಾಕ್ಕೆ 94 ಭಾರತೀಯರು ಹೋಗಿದ್ದಾರೆ.

ಪಾಕ್​ ಪೌರತ್ವ ಪಡೆದ ಭಾರತೀಯರು
2020ರಲ್ಲಿ ಏಳು ಮತ್ತು 2021ರಲ್ಲಿ 24 ಭಾರತೀಯರು ಪಾಕಿ ಸ್ತಾನದ ಪೌರತ್ವ ಪಡೆಯಲು ಭಾರತದ ಪೌರತ್ವ ತ್ಯಜಿಸಿದ್ದಾರೆ.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries