ಮುಂಬೈ: ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಪ್ರತೀ ಡಾಲರ್ ಗೆ 77.55ರೂಗೆ ಮೌಲ್ಯ ಕುಸಿದಿದೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತ ಕಂಡಿದ್ದು, ಬರೊಬ್ಬರಿ 30 ಪೈಸೆ ಇಳಿಕೆ ದಾಖಲಿಸಿದೆ. ಆ ಮೂಲಕ ರೂಪಾಯಿ ಮೌಲ್ಯ ಪ್ರತೀ ಡಾಲರ್ ಎದುರು 77.55ಕ್ಕೆ ಕುಸಿತಗೊಂಡಿದೆ.
ಏಷ್ಯಾದ ಕರೆನ್ಸಿಗಳ ವ್ಯಾಪಕ ಕುಸಿತ ಮತ್ತು ದೇಶೀಯ ಇಕ್ವಿಟಿ ಮಾರುಕಟ್ಟೆಗಳಲ್ಲಿನ ನೀರಸ ಪ್ರವೃತ್ತಿಯ ನಡುವೆ ಅಮೆರಿಕ ಡಾಲರ್ ವಿರುದ್ಧ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಗುರುವಾರ 30 ಪೈಸೆಯಷ್ಟು ಕುಸಿದು 77.55 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆ ಮೂಲಕ ರೂಪಾಯಿ ಮೌಲ್ಯ ಈ ವಾರ ಎರಡನೇ ಬಾರಿಗೆ ದಾಖಲೆಯ ಕುಸಿತ ಕಂಡಿದೆ.
ವಿದೇಶಿ ನಿಧಿಯ ಹೊರಹರಿವು ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಸಹ ದೇಶೀಯ ಘಟಕದ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.
ಅಂತೆಯೇ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 77.52 ಕ್ಕೆ ಕುಸಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 77.25ರೂಗೆ ಸ್ಥಿರವಾಗಿತ್ತು. ದೇಶೀಯ ಇಕ್ವಿಟಿ ಮಾರುಕಟ್ಟೆಯ ಮುಂಭಾಗದಲ್ಲಿ, ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಸುಮಾರು 2 ಪ್ರತಿಶತದಷ್ಟು ಕುಸಿತವಾಗಿತ್ತು.
ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ತಿಂಗಳು ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಹಣದುಬ್ಬರ ಪ್ರಕ್ಷೇಪಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಮತ್ತು ಹಣದುಬ್ಬರವನ್ನು ತಗ್ಗಿಸಲು ದರ ಹೆಚ್ಚಳವನ್ನು ಪರಿಗಣಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಕೇಂದ್ರ ಬ್ಯಾಂಕ್‌ಗಳ ಬಡ್ಡಿ ದರ ಹೆಚ್ಚಳ ಪ್ರಚೋದಿಸುವ ಹಣದುಬ್ಬರದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ರೂಪಾಯಿ ಮೌಲ್ಯ ಕುಸಿದಿದೆ.