ನವದೆಹಲಿ: ಹಿರಿಯ ನಾಗರಿಕರಿಗಾಗಿ ಇರುವ ರಾಷ್ಟ್ರೀಯ ಸಹಾಯವಾಣಿಯು ಪಿಂಚಣಿ, ಕೋವಿಡ್ ಸಹಾಯ ಮತ್ತು ಇತರೆ ದೂರುಗಳಿಗೆ ಸಂಬಂಧಿಸಿದ 79,000ಕ್ಕೂ ಹೆಚ್ಚು ಕರೆಗಳನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಈವರೆಗೆ ಸ್ವೀಕರಿಸಿದೆ ಎಂದು ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ.

ಕಳೆದ ವರ್ಷದ ಅಕ್ಟೋಬರ್ 1ರಿಂದ ಈವರೆಗೆ 5,07,493 ಕರೆಗಳು ಬಂದಿದ್ದು, ಇದರಲ್ಲಿ ಕಿರುಕುಳ, ಕರೆಗಳ ಸ್ಥಗಿತ, ಹಿರಿಯ ನಾಗರಿಕರಿಗೆ ಸಂಬಂಧಿಸದ 4,28,442 ಸೇವೆಯೇತರ ಕರೆಗಳು ಸೇರಿವೆ.
ಇನ್ನು 79,051 ಕರೆಗಳ ಪೈಕಿ ಅತಿಹೆಚ್ಚು ಪಿಂಚಣಿಗೆ ಸಂಬಂಧಿಸಿದ 22,430 ಕರೆಗಳು, ಕೋವಿಡ್‌ಗೆ ಸಂಬಂಧಿಸಿದ 6,406 ಕರೆಗಳು, ಹಿರಿಯ ನಾಗರಿಕರ ವಸತಿ ಗೃಹಗಳು(2040) ಸೇರಿದಂತೆ ಹಲವು ಕರೆಗಳು ಬಂದಿವೆ. ಅಲ್ಲದೆ 14567 ಉಚಿತ ದೂರವಾಣಿ ಸಂಖ್ಯೆಗೆ 44,348 ಪುರುಷರು ತಮ್ಮ ನೆರವಿಗಾಗಿ ಕರೆ ಮಾಡಿದ್ದರೆ 18,363 ಮಹಿಳೆಯರು ಕರೆ ಮಾಡಿದ್ದರು.
ಉತ್ತರ ಪ್ರದೇಶದಿಂದ ಅತಿಹೆಚ್ಚು ಕರೆಗಳು 96,764 ಕರೆಗಳು ಬಂದಿದ್ದರೆ, ಮಹಾರಾಷ್ಟ್ರದಿಂದ 40,239 ಕರೆಗಳು ಬಂದಿವೆ. ಇನ್ನು ಕರ್ನಾಟಕದಿಂದ 29,953 ಕರೆಗಳು ಬಂದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಅವಧಿಯಲ್ಲಿ ಹಿರಿಯ ನಾಗರಿಕರ ನೆರವಿಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿತ್ತು.