ಮುಂಬೈ: ಡೋ ಜೋನ್ಸ್ ಮತ್ತು ನಾಸ್‌ಡಾಕ್ ನ ಶೇ.3.57 ಮತ್ತು ಶೇ.5ರಷ್ಟು ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆ ಕೂಡ ತೀವ್ರ ಪ್ರಮಾಣದಲ್ಲಿ ಕುಸಿತವಾಗಿದ್ದು, ಹೂಡಿಕೆದಾರರು ಗುರುವಾರ 6.72 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ತಲಾ ಶೇ.2.6ರಷ್ಟು ಕುಸಿತ ಕಂಡಿವೆ. ಈ ಹಿಂದೆ ನಿಫ್ಟಿ 431 ಅಂಕಗಳನ್ನು ಕಳೆದುಕೊಂಡು 15809.4 ಕ್ಕೆ ಕುಸಿದರೆ, ಸೆನ್ಸೆಕ್ಸ್ 1416.30 ಅಂಕ ಕುಸಿದು 52792.23 ಕ್ಕೆ ತಲುಪಿತು. ಇಂದಿನ ವಹಿವಾಟಿನಲ್ಲಿ ವಿಪ್ರೋ , ಎಚ್‌ಸಿಎಲ್ ಟೆಕ್, ಟೆಕ್ ಎಂ, ಇನ್ಫಿ ಮತ್ತು ಟಿಸಿಎಸ್ ಸಂಸ್ಥೆಗಳ ಷೇರುಗಳು ತೀವ್ರ ಪ್ರಮಾಣದಲ್ಲಿ ಅಂದರೆ ಶೇ.5.4ರಿಂದ 6.25ರಷ್ಟು ಕುಸಿದವು.
ಎಫ್‌ಐಐಗಳು 4899.92 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದವು. ನಿಫ್ಟಿ ಮಿಡ್‌ಕ್ಯಾಪ್ 100 ಸುಮಾರುಶೇ. 3ರಷ್ಟು ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇ.2.7ರಷ್ಟು ಕುಸಿದು 27271.9 ಮತ್ತು 8912.3 ಪಾಯಿಂಟ್‌ಗಳಿಗೆ ಕುಸಿತು.
ಈ ಕುರಿತು ಮಾಹಿತಿ ನೀಡಿರುವ ಇಂಡಿಯಾಚಾರ್ಟ್ಸ್‌ನ ಸಂಸ್ಥಾಪಕರಾದ ಎಸ್‌ಕೆ ಶ್ರೀವಾಸ್ತವ ಅವರು ಮುಂದಿನ ದಿನಗಳಲ್ಲಿ ನಿಫ್ಟಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಶೇ.4ರಷ್ಟು ಅಥವಾ 15200 ಕ್ಕೆ ಇಳಿಯಬಹುದು ಎಂದು ಅಂದಾಜಿಸಿದ್ದಾರೆ.