ಬದಿಯಡ್ಕ: ಎಂಟರ ಹರೆಯದ ಪುಟಾಣಿಯೊಬ್ಬಳು ಎರಡು ನಿಮಿಷಗಳಲ್ಲಿ 80 ಪ್ರಶ್ನೆಗಳಿಗೆ ಉತ್ತರಿಸಿ ಅಬಾಕಸ್ ನಡೆಸಿದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾ|ಳೆ.
ಪ್ರಸ್ತುತ ನೆದಲೇoರ್ಡ್ ನಲ್ಲಿ ವಾಸಿಸುತ್ತಿರುವ ಮೂಲತಃ ನೀರ್ಚಾಲು ನಿವಾಸಿ ಸಾತ್ವಿಕ್ ಚಾತ್ರ ಹಾಗೂ ಅಕ್ಷತಾ ಚಾತ್ರಾ ದಂಪತಿಗಳ 8ರ ಹರೆಯದ ಪುತ್ರಿ ಅರುಹ್ಯ ಇಂತಹದೊಂದು ಸಾಧನೆ ಮೆರೆದವಳು. ಈಕೆ ಅಬಾಕಸ್ ನಡೆಸಿದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಎರಡು ನಿಮಿಷ 20 ಸೆಕೆಂಡ್ ಗಳಲ್ಲಿ ಬರೋಬ್ಬರಿ 80 ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಿಸಿ ದಾ|ಖಲೆ ನಿರ್ಮಿಸಿದ್ದ|ಆಳೆ. ಈ ಮೂಲಕ ಈಕೆ ಅಬಾಕಸ್ ವಲ್ರ್ಡ್ ಚಾಂಫಿಯನ್ ಶಿಪ್ ಪಟ್ಟ ಮುಡಿಗೇರಿಸಿ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಪ್ರಸ್ತುತ ನೆದರ್ಲಂಡ್ ನಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರುಹ್ಯ ಓಪನ್ ನೇಶನಲ್ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿದವಳು. ರಾಷ್ಟ್ರೀಯ ಸ್ಪರ್ಧೆಯಲ್ಲಿ ಸದಾ ಮೊದಲ ಸ್ಥಾನ ಕಾಯ್ದುಕೊಂಡಿದ್ದ ಈಕೆ ಈಗಿನ ನೂತನ ಸಾಧನೆ ಬೆರಗುಗೊಳಿಸಿದೆ. ಈಕೆ ನೀರ್ಚಾಲು ದುರ್ಗಾನಿಲಯದ ಪ್ರಕಾಶ್ ಭಟ್-ಅನುರಾಧಾ ಭಟ್ ದಂಪತಿಗಳ ಮೊಮ್ಮಗಳು.
ಅಭಿಮತ:
ಅರುಹ್ಯಳ ಸಾಧನೆ ನಂಬಲಸಾಧ್ಯ. ಎಂತಹದೇ ಗಣಿತ ಚಮತ್ಕಾರಗಳನ್ನೂ ಕ್ಷಣಗ|ಳಲ್ಲಿ ಪರಿಹರಿಸುವ ಈಕೆ ಗಣಿತ ಆಟದ ವಿಷಯ. ಅಬ|ಆಕಸ್ ಮಾನಸಿಕ |ಏಕಾಗ್ರತೆಯ ಸುಧಾರಣೆ, ಮಾನಸಿಕ ವಿಕಾಸದ ನೆಲೆಯಲ್ಲಿ ವಿಶ್ವ ಮಟ್ಟದ ಗಣಿತ ಸ್ಪರ್ಧೆ ಸಂಘಟಿಸುತ್ತಿದೆ. 2021-22ನೇ ಸಾಲಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅರುಹ್ಯ ವಲ್ರ್ಡ್ ಚಾ||ಂಫಿಯನ್ ಪಟ್ಟ ಗಿಟ್ಟಿಸಿಕೊಂಡಿರುವುದು ಹೆಮ್ಮೆ ಮೂಡಿಸಿದೆ.
-ಸೀಮಾ ಜೈನ್
ಅಬಾಕಸ್ ಮುಖ್ಯಸ್ಥೆ