ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಕಚೇರಿಗೆ ಬನ್ನಿ ಎಂದು ಸೂಚಿಸಿದ ಬೆನ್ನಲ್ಲೇ ಎಡ್‌ಟೆಕ್ ಸ್ಟಾರ್ಟ್‌ಅಪ್ ವೈಟ್‌ಹ್ಯಾಟ್ ಜೂನಿಯರ್‌ನ 800ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.
ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಕಚೇರಿಗೆ ಬನ್ನಿ ಎಂದು ಸೂಚಿಸಿದ ಬೆನ್ನಲ್ಲೇ ಎಡ್‌ಟೆಕ್ ಸ್ಟಾರ್ಟ್‌ಅಪ್ ವೈಟ್‌ಹ್ಯಾಟ್ ಜೂನಿಯರ್‌ನ 800ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಆಡಳಿತ ಮಂಡಳಿಯನ್ನು ಇಕ್ಕಟ್ಟಿಗೆ ತಳ್ಳಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಕಳೆದ ಮಾರ್ಚ್ 18, ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ ತಮ್ಮ ತಮ್ಮ ಊರುಗಳು, ಮನೆಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಒಂದು ತಿಂಗಳ ಅವಧಿಯೊಳಗೆ ಆಯಾ ಕಚೇರಿ ಸ್ಥಳಗಳಿಗೆ ಹಿಂತಿರುಗುವಂತೆ ಸೂಚಿಸಲಾಗಿತ್ತು.
ಇನ್ನು ಇಂಕ್42' ವರದಿಯ ಪ್ರಕಾರ ಮಾರಾಟ, ಕೋಡಿಂಗ್ ಮತ್ತು ಗಣಿತ ತಂಡಗಳಿಗೆ ಕ್ರಮವಾಗಿ ಗುರುಗ್ರಾಮ್, ಮುಂಬೈ ಮತ್ತು ಬೆಂಗಳೂರು ಕಚೇರಿಯಿಂದ ಕೆಲಸ ಮುಂದುವರಿಸುವಂತೆ ಸೂಚಿಸಲಾಗಿತ್ತು.ಇದಾದ ಬೆನ್ನಿಗೆ ಉದ್ಯೋಗಿಗಳು ಸಾಲು ಸಾಲಾಗಿ ರಾಜೀನಾಮೆ ನೀಡಿದ್ದಾರೆ.
ಕಂಪನಿಯಾದ್ಯಂತ 800ಕ್ಕೂ ಹೆಚ್ಚು ಪೂರ್ಣ ಕಾಲಿಕ ಉದ್ಯೋಗಿಗಳು ತಮ್ಮ ತಮ್ಮ ಕಚೇರಿ ಸ್ಥಳಗಳಿಗೆ ಹಿಂದಿರುಗಲು ಬಯಸದೇ, ಸ್ವಯಂಪ್ರೇರಣೆಯಿಂದ ಸ್ಟಾರ್ಟ್‌ಅಪ್‌ಗೆ ರಾಜೀನಾಮೆ ಎಂದು ವರದಿಯಾಗಿದೆ.