ನವದೆಹಲಿ: ದುಬಾರಿ ವೆಚ್ಚದ ಶಾಖೋತ್ಪನ್ನ ವಿದ್ಯುತ್ ಅವಲಂಬನೆ ತಪ್ಪಿಸಲು ಅಗ್ಗದ ಹಸಿರು ಇಂಧನ ಉತ್ಪಾದನೆಗೆ ಒತ್ತುನೀಡಿರುವ ಕೇಂದ್ರ ಸರ್ಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದ ಸುಮಾರು 81 ಕಲ್ಲಿದ್ದಲು ಆಧರಿತ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಗುರಿ ಹೊಂದಿದೆ.

'ಹಸಿರು ಇಂಧನ ಉತ್ಪಾದನೆಯ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಅಗ್ಗದ ನವೀಕರಿಸಬಹುದಾದ ಇಂಧನ ಉತ್ಪಾದನೆ ವ್ಯವಸ್ಥೆಗೆ ಬದಲಾವಣೆಯಾಗುವವರೆಗೆ ಕಾರ್ಯನಿರ್ವಹಿಸಲಿವೆ' ಎಂದು ಮೇ 26ರಂದು ಕೇಂದ್ರ ಇಂಧನ ಸಚಿವಾಲಯ, ಕೇಂದ್ರ ಮತ್ತು ರಾಜ್ಯದ ಉನ್ನತ ಅಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ.
ದೇಶದಲ್ಲಿ 173 ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿವೆ. ಹಳೆಯ ಮತ್ತು ದುಬಾರಿ ವೆಚ್ಚದ ವಿದ್ಯುತ್ ಸ್ಥಾವರಗಳನ್ನು ಮುಚ್ಚುವ ಬಗ್ಗೆ ಈ ಪತ್ರದಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ.