ಥಲಸ್ಸೆಮಿಯಾ ರೋಗದ ಬಗ್ಗೆ ಎಂದಾದರೂ ಕೇಳಿದ್ದೀರಾ? ಹೌದು, ಇದೊಂದು ಅಣುವಂಶೀಕವಾಗಿ ತಂದೆ-ತಾಯಿಯಿಂದ ಮಕ್ಕಳಿಗೆ ಬರುವ ರಕ್ತದ ಕಾಯಿಲೆಯಾಗಿದೆ. ಈ ಕಾಯಿಲೆಯ ಲಕ್ಷಣ ಅದರ ಚಿಕಿತ್ಸೆಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 8ರಂದು ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುವುದು. ಜೊತೆಗೆ ಈ ಥಲಸ್ಸೆಮಿಯಾದಿಂದ ಬಳಲುತ್ತಿರುವ ಎಲ್ಲಾ ರೋಗಿಗಳು ಮತ್ತು ಅವರ ಕಾಯಿಲೆಯ ಹೊರೆಯ ಹೊರತಾಗಿಯೂ ಜೀವನದ ಭರವಸೆಯನ್ನು ಎಂದಿಗೂ ಕಳೆದುಕೊಳ್ಳದ ಅವರ ಹೆತ್ತವರ ಗೌರವಾರ್ಥವಾಗಿ ಮತ್ತು ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತಿರುವ ಮತ್ತು ಸುಧಾರಿತ ಗುಣಮಟ್ಟವನ್ನು ಒದಗಿಸಲು ಪ್ರಯತ್ನಿಸುತ್ತಿರುವ ಎಲ್ಲಾ ವಿಜ್ಞಾನಿಗಳಿಗೆ ಗೌರವಾರ್ಥವಾಗಿ ಆಚರಿಸುವ ದಿನವೂ ಆಗಿದೆ. ಈ ದಿನದ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
ವಿಶ್ವ ಥಲಸ್ಸೆಮಿಯಾ ದಿನದ ಇತಿಹಾಸ, ಮಹತ್ವ ಹಾಗೂ ಥೀಮ್ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಥಲಸ್ಸೆಮಿಯಾ ಕಾಯಿಲೆ ಎಂದರೇನು?
ಇದು ಆನುವಂಶಿಕವಾಗಿ ಬರುವ ರಕ್ತದ ಕಾಯಿಲೆಯಾಗಿದ್ದು ಅದು ಪೋಷಕರಿಂದ ಮಕ್ಕಳಿಗೆ ಹರಡುತ್ತದೆ. ಈ ರೋಗವು ಒಂದು ರೀತಿಯ ರಕ್ತದ ಕಾಯಿಲೆಯಾಗಿದ್ದು, ಇದರಲ್ಲಿ ಮಗುವಿನ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಸರಿಯಾಗಿ ಆಗದೆ ಈ ಜೀವಕೋಶಗಳ ಜೀವಿತಾವಧಿಯೂ ಬಹಳ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಈ ಮಕ್ಕಳಿಗೆ ಪ್ರತಿ 21 ದಿನಗಳ ನಂತರ ಕನಿಷ್ಠ ಒಂದು ಯೂನಿಟ್ ರಕ್ತದ ಅಗತ್ಯವಿರುತ್ತದೆ. ಆದರೆ ಈ ಮಕ್ಕಳು ಬಹಳ ದಿನ ಬದುಕುವುದಿಲ್ಲ. ಕೆಲವರು ಬದುಕುಳಿದರೂ, ಅವರು ಆಗಾಗ್ಗೆ ಕೆಲವು ಕಾಯಿಲೆಗಳಿಂದ ಬಳಲಿ, ಸಂತೋಷಸ ಜೀವನವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.ಈ ರೋಗವು ಮೆಡಿಟರೇನಿಯನ್, ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್ ಪೂರ್ವಜರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
ಥಲಸ್ಸೆಮಿಯಾ ರೋಗದ ಲಕ್ಷಣಗಳೇನು?: - ಅರೆನಿದ್ರಾವಸ್ಥೆ ಮತ್ತು ಆಯಾಸ - ಎದೆ ನೋವು - ಉಸಿರಾಟದ ತೊಂದರೆ - ವಿಳಂಬವಾದ ಬೆಳವಣಿಗೆ - ತಲೆನೋವು - ಕಾಮಾಲೆ ಮತ್ತು ತೆಳು ಚರ್ಮ - ತಲೆತಿರುಗುವಿಕೆ ಮತ್ತು ಮೂರ್ಛೆ - ಸೋಂಕುಗಳಿಗೆ ಹೆಚ್ಚಿನ ಒಳಗಾಗುವಿಕೆ ಇತ್ಯಾದಿ. ಆದ್ದರಿಂದ, ಈ ದಿನವನ್ನು ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಮರ್ಪಿಸಲಾಗಿದೆ. ಅವರಿಗೆ ಸಾಮಾನ್ಯ ವ್ಯಕ್ತಿಯಂತೆ ಬದುಕಲು ಮತ್ತು ಸಮಾಜ, ರಾಜ್ಯ, ಸಮುದಾಯ, ದೇಶ ಇತ್ಯಾದಿಗಳಲ್ಲಿ ರೋಗ ಹರಡುವುದನ್ನು ತಡೆಯಲು ವಿಶೇಷ ಅವಕಾಶವನ್ನು ಒದಗಿಸುತ್ತದೆ.
ವಿಶ್ವ ಥಲಸ್ಸೆಮಿಯಾ ದಿನದ ಉದ್ದೇಶ: - ರೋಗ, ಅದರ ಲಕ್ಷಣಗಳು ಮತ್ತು ಅದರೊಂದಿಗೆ ಬದುಕುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸವುದು. - ಒಬ್ಬ ವ್ಯಕ್ತಿಯು ಥಲಸ್ಸೆಮಿಯಾದಿಂದ ಬಳಲುತ್ತಿದ್ದರೆ, ಮದುವೆಗಯಾಗುವ ಮೊದಲೇ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂಬ ಅರಿವು ಮೂಡಿಸುವುದು. - ಮಕ್ಕಳ ಆರೋಗ್ಯ, ಸಮಾಜ ಮತ್ತು ಇಡೀ ಜಗತ್ತಿಗೆ ವ್ಯಾಕ್ಸಿನೇಷನ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು. - ವ್ಯಾಕ್ಸಿನೇಷನ್ ಬಗ್ಗೆ ತಪ್ಪು ಕಲ್ಪನೆಗಳನ್ನು ನಿವಾರಿಸುವುದು.
ವಿಶ್ವ ಥಲಸೇಮಿಯಾ ದಿನವನ್ನು ಹೇಗೆ ಆಚರಿಸಲಾಗುತ್ತದೆ? ಈ ರೋಗ, ಅದರ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಲ್ಲದೆ, ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ರೋಗದ ಬಗ್ಗೆ ಜ್ಞಾನವನ್ನು ಪಡೆಯಲು ಈವೆಂಟ್‌ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಥಲಸ್ಸೆಮಿಯಾ ಇಂಟರ್‌ನ್ಯಾಶನಲ್ ಫೆಡರೇಶನ್ (ಟಿಐಎಫ್) ಲಾಭರಹಿತ ಮತ್ತು ಸರ್ಕಾರೇತರ ರೋಗಿಗಳ-ಚಾಲಿತ ಸಂಸ್ಥೆಯಾಗಿದ್ದು, ಹಲವಾರು ದೇಶಗಳಲ್ಲಿನ ಸಂಬಂಧಿತ ಸದಸ್ಯರೊಂದಿಗೆ ಕಾರ್ಯಕ್ರಮ ಆಯೋಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದು ಮಾತ್ರವಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಆರೋಗ್ಯ ಸಂಸ್ಥೆಗಳು ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಮೂಲಭೂತ ಹಕ್ಕುಗಳ ಮೇಲೆ ಕೇಂದ್ರೀಕರಿಸುತ್ತವೆ.
ಜನರಲ್ಲಿ ಅರಿವು ಮೂಡಿಸಲು ಪೋಸ್ಟರ್, ಬ್ಯಾನರ್‌ಗಳನ್ನೂ ಸಿದ್ಧಪಡಿಸಲಾಗುವುದು. ಆರೋಗ್ಯ-ಸಂಬಂಧಿತ ವಿಷಯಗಳ ಕುರಿತು ಚರ್ಚೆಗಳು, ರೋಗಿಯ ಜೀವನದ ಗುಣಮಟ್ಟದ ಬಗ್ಗೆ ಥಲಸ್ಸೆಮಿಯಾ ರೋಗದ ಬಗ್ಗೆ ಚರ್ಚೆ ಮುಂತಾದ ಹಲವಾರು ಚಟುವಟಿಕೆಗಳನ್ನು ಸಹ ಆಯೋಜಿಸಲಾಗುವುದು. ಟಿಐಎಫ್ ಹಿಮೋಗ್ಲೋಬಿನೋಪತಿಗಳು, ಹಿಮೋಗ್ಲೋಬಿನ್ ಅಸ್ವಸ್ಥತೆಗಳು ಮತ್ತು ಕಬ್ಬಿಣದ ಕೊರತೆಯ ಬಗ್ಗೆ ಜನರಲ್ಲಿ ವಿಶೇಷವಾಗಿ ಯುವಜನರಲ್ಲಿ ಮಾಹಿತಿಯನ್ನು ಹರಡುತ್ತದೆ. ಥಲಸ್ಸೆಮಿಯಾ ರೋಗದ ಬಗ್ಗೆ ಶೈಕ್ಷಣಿಕ ಸಾಮಗ್ರಿಗಳನ್ನು ಸಹ ಜನರು ಮತ್ತು ಯುವಕರಿಗೆ ವಿತರಿಸಲಾಗುತ್ತದೆ.