HEALTH TIPS

ಲಂಕಾತಂಕ: ಮಹಿಂದ ರಾಜಪಕ್ಸ ಅಜ್ಞಾತ ಸ್ಥಳಕ್ಕೆ ಸ್ಥಳಾಂತರ, ಕೊಲೊಂಬೊದಲ್ಲಿ ಹಿಂಸಾಚಾರಕ್ಕೆ ಮೃತಪಟ್ಟವರ ಸಂಖ್ಯೆ 8ಕ್ಕೇರಿಕೆ!

    ಕೊಲೊಂಬೊ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾ ರಾಜಧಾನಿ ಕೊಲೊಂಬೊ ನಗರದಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಾಳಿ ಭಾರೀ ಶಸ್ತ್ರಸಜ್ಜಿತ ಪಡೆಗಳು ಮಹಿಂದ ರಾಜಪಕ್ಸೆ ಅವರನ್ನು ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸದಿಂದ ಸ್ಥಳಾಂತರಿಸಿವೆ.

    ರಾಜಧಾನಿ ಕೊಲೊಂಬೊದಲ್ಲಿರುವ ಮಹಿಂದಾ ರಾಜಪಕ್ಸ ಅವರ  "ಟೆಂಪಲ್ ಟ್ರೀಸ್" ನಿವಾಸಕ್ಕೆ ಬಲವಂತವಾಗಿ ನುಗ್ಗಿದ ಪ್ರತಿಭಟನಾಕಾರರು ನಂತರ ರಾಜಪಕ್ಸೆ ಅವರ ಕುಟುಂಬಸ್ಥರು ಇರುವ ಎರಡು ಅಂತಸ್ತಿನ ಮುಖ್ಯ ಕಟ್ಟಡಕ್ಕೆ ನುಗ್ಗಲು ಪ್ರಯತ್ನಿಸಿದರು.

     ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮುಂಜಾನೆ ಕಾರ್ಯಾಚರಣೆಯ ನಂತರ, ಮಹಿಂದ ರಾಜಪಕ್ಸ ಮತ್ತು ಅವರ ಕುಟುಂಬವನ್ನು ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ ಎಂದು ಉನ್ನತ ಭದ್ರತಾ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರ ಮನೆಯ ಕಂಪೌಂಡ್ ಮೇಲೆ ಕನಿಷ್ಠ 10 ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ.

     ಹಿಂಸಾತ್ಮಕ ಪ್ರತಿಭಟನೆಯ ನಂತರ ರಾಜಪಕ್ಸೆಯವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು, ಹಿಂಸಾಚಾರದಲ್ಲಿ ಶಾಸಕರು ಸೇರಿದಂತೆ ಇದುವರೆಗೆ 8 ಮಂದಿ ಮೃತಪಟ್ಟಿದ್ದು, ಸುಮಾರು 200 ಜನರು ಗಾಯಗೊಂಡಿದ್ದಾರೆ.

      ವಸಾಹತುಶಾಹಿ ಯುಗದ ಕಟ್ಟಡದ ಎಲ್ಲಾ ಮೂರು ಪ್ರವೇಶದ್ವಾರಗಳಲ್ಲಿ ಜನಸಮೂಹವನ್ನು ತಡೆಹಿಡಿಯಲು ಪೊಲೀಸರು ಅಶ್ರುವಾಯುಗಳ ಸುರಿಮಳೆಗೈದರು. ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದರು ಎಂದು ಭದ್ರತಾ ಅಧಿಕಾರಿ ಹೇಳಿದ್ದಾರೆ. 

      ಶುಕ್ರವಾರದಿಂದ ತುರ್ತು ಪರಿಸ್ಥಿತಿಯಲ್ಲಿರುವ ಕರ್ಫ್ಯೂಗೆ ಒಳಪಟ್ಟಿರುವ ದೇಶದಲ್ಲಿ ರಾಜಪಕ್ಸೆಯ ಉನ್ನತ ನಿಷ್ಠಾವಂತರ 12ಕ್ಕೂ ಅಧಿಕ ಮನೆಗಳನ್ನು ಸುಟ್ಟುಹಾಕಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries