ಕೊಲ್ಲಂ: ಕೊಲ್ಲಂನ ಪತ್ತನಾಪುರದಲ್ಲಿರುವ ಖಾಸಗಿ ಬ್ಯಾಂಕ್‍ನಲ್ಲಿ ಭಾರೀ ದರೋಡೆ ನಡೆದಿದೆ. ಕಳ್ಳರು ಸುಮಾರು 90 ಪವನ್ ಚಿನ್ನಾಭರಣ ಹಾಗೂ ಸುಮಾರು ನಾಲ್ಕು ಲಕ್ಷ ರೂ. ಲಪಟಾಯಿಸಿದ್ದಾರೆ. ಪತ್ತನಾಪುರ ಜನತಾ ಜಂಕ್ಷನ್ ನಲ್ಲಿ ಕಾರ್ಯಾಚರಿಸುತ್ತಿರುವ ಪತ್ತನಾಪುರ ಬ್ಯಾಂಕರ್ಸ್ ಎಂಬ ಕಂಪನಿಯಲ್ಲಿ ಕಳ್ಳತನ ನಡೆದಿದೆ.
ಕಳ್ಳತನವು ವಿಚಿತ್ರ ರೀತಿಯಲ್ಲಿ ನಡೆಯಿತು. ಕಚೇರಿ ಕೊಠಡಿಯಲ್ಲಿ ನೆಲದ ಮೇಲೆ ಮೂರು ಎಲೆಗಳು ಮತ್ತು ತಮಿಳು ದೇವರ ಚಿತ್ರ ಹಾಕಲಾಗಿತ್ತು. ನಿಂಬೆಹಣ್ಣಿನಲ್ಲಿ ಶೂಲ ಅಂಟಿಕೊಂಡಿತ್ತು, ಹಳದಿ ಬಳ್ಳಿ, ಮದ್ಯ ಮತ್ತು ಪೋರ್ಕ್ ಕೂಡ ಇತ್ತು. ಇದು ಕಳವಿಗೂ ಮೊದಲು ಪೂಜೆ ನಡೆದಿದ್ದರ ಸಂಕೇತ ಎಂದು ಪೋಲೀಸರು ತಿಳಿಸಿದ್ದಾರೆ. ಕೋಣೆಯ ತುಂಬ ಕೂದಲು ತುಂಬಿತ್ತು.
ಶ್ವಾನ ದಳಕ್ಕೆ ವಾಸನೆ ಬರದಂತೆ ಈ ರೀತಿ ಮಾಡಲಾಗಿದೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಬ್ಯಾಂಕ್ ನ ಲಾಕರ್ ತೆರೆದು ದರೋಡೆ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೋಲೀಸರು ತಿಳಿಸಿದ್ದಾರೆ.