ತಿರುವನಂತಪುರ: 920 ಬಸ್‍ಗಳನ್ನು ಕೆಡವಿ ಮಾರಾಟ ಮಾಡಬೇಕಿದೆ ಎಂದು ಕೆಎಸ್‍ಆರ್‍ಟಿಸಿ ಹೇಳಿದೆ. ಕೆಎಸ್‍ಆರ್‍ಟಿಸಿ ಪ್ರಕಾರ, ಈ ಬಸ್‍ಗಳು ತುಂಬಾ ಹಳೆಯದಾಗಿದ್ದು, ಸರಿಯಾಗಿ ಬಳಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ 681 ಸಾಮಾನ್ಯ ಬಸ್‍ಗಳು ಮತ್ತು 239 ವಿಶೇಷ ಬಸ್‍ಗಳು.
ಕೆಎಸ್‍ಆರ್‍ಟಿಸಿ ಹೇಳಿರುವಂತೆ, ಒಂಬತ್ತರಿಂದ 16 ವರ್ಷಗಳವರೆಗೆ ಬಳಸಿದ ಬಸ್‍ಗಳನ್ನು ಸ್ಕ್ರ್ಯಾಪ್ ವರ್ಗಕ್ಕೆ ಸೇರಿಸಲಾಗಿದೆ. 2800 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ವಿವಿಧ ಡಿಪೆÇೀಗಳಲ್ಲಿ 'ಡಂಪ್' ಮಾಡಲಾಗುತ್ತಿದೆ ಎಂಬ ಆರೋಪವನ್ನು ನಿಗಮವು ಹೈಕೋರ್ಟ್‍ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ನಿರಾಕರಿಸಿದೆ.
ಕೊರೋನಾಗೆ ಮೊದಲು, 6202 ಬಸ್‍ಗಳನ್ನು ಕೆಎಸ್‍ಆರ್‍ಟಿಸಿ 4336 ವೇಳಾಪಟ್ಟಿಗಳಲ್ಲಿ ನಿರ್ವಹಿಸುತ್ತಿತ್ತು. ಕೊರೋನಾ ಬಂದಾಗ ಎಲ್ಲವೂ ಅಸ್ತವ್ಯಸ್ತವಾಯಿತು.
ಲಾಕ್‍ಡೌನ್‍ನಲ್ಲಿ ಎಲ್ಲಾ ಬಸ್‍ಗಳು ನಿಲುಗಡೆಗೊಳಿಸಬೇಕಾಯಿತು. ಲಾಕ್‍ಡೌನ್ ಹಿಂಪಡೆದ ನಂತರವೂ ಬಸ್‍ಗಳು ಸಂಪೂರ್ಣವಾಗಿ ಸಂಚಾರ ನಡೆಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಐಶಾರಾಮಿ ಬಸ್‍ಗಳು ಸಂಚರಿಸಲೇ ಇಲ್ಲ. ಕೊರೋನಾ ಮಾನದಂಡದ ಕಾರಣ ಎ.ಸಿ. ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರಕ್ಕೆ ಅಡ್ಡಿಯಾಗಿರುವುದು ಮುಖ್ಯ ಕಾರಣ.
ನಿಲ್ಲಿಸಿದ ಬಸ್ ಗಳ ಪೈಕಿ 21 ದುರಸ್ತಿ ಮಾಡಿ ಬಳಸಬಹುದು. ಬಸ್ ತಯಾರಕರ ಅಭಿಪ್ರಾಯವನ್ನು ಪರಿಗಣಿಸಿ ಉಳಿದವುಗಳನ್ನು ರದ್ದುಗೊಳಿಸಲಾಗುತ್ತಿದೆ. ರಸ್ತೆಸಾರಿಗೆ 100 ಕಾರ್ಯಾಗಾರಗಳನ್ನು ಮತ್ತು 93 ಡಿಪೆÇೀಗಳನ್ನು ಹೊಂದಿದೆ. ವಿವಿಧ ಡಿಪೆÇೀಗಳಲ್ಲಿ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಹಾಗೂ ಇತರೆ ಬಸ್‍ಗಳ ಸೇವೆಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಸೇವೆ ರಹಿತ ಬಸ್‍ಗಳನ್ನು ಪ್ರತ್ಯೇಕ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.