ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿವಿಧ ವಿಷಯಗಳಲ್ಲಿ ತಾತ್ಕಾಲಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆ (ಮಲಯಾಳಂ) - ಮಲಯಾಳಂ - ಒಂದು, ಭೌತಿಕ ವಿಜ್ಞಾನ - ಒಂದು, ಸಮಾಜ ವಿಜ್ಞಾನ - ಒಂದು, ಪರಿಸರ ವಿಜ್ಞಾನ - ಒಂದು, ಗಣಿತ - ಒಂದು, ಯುಪಿ (ಮಲಯಾಳಂ) - ಮೂರು, ಯುಪಿ (ಕನ್ನಡ) - ಒಂದು, ಎಲ್‍ಪಿ (ಕನ್ನಡ) - ಒಂದು, (ಅರೇಬಿಕ್) - ಒಂದು, ಪ್ರೌಢಶಾಲೆ (ಕನ್ನಡ) - ಕನ್ನಡ - ಒಂದು, ಇಂಗ್ಲೀಷ್ - ಒಂದು (ಕನ್ನಡ ತಿಳಿದಿರಬೇಕು), ಹಿಂದಿ - ಒಂದು (ಕನ್ನಡ ತಿಳಿದಿರಬೇಕು), ಚಿತ್ರಕಲೆ - ಒಂದು (ಕನ್ನಡ ತಿಳಿದಿರಬೇಕು), ಪೂರ್ವ ಪ್ರಾಥಮಿಕ ಮಲಯಾಳಂ - ಒಂದು, ಪೂರ್ವ ಪ್ರಾಥಮಿಕ ಕನ್ನಡ - ಒಂದು ಹುದ್ದೆಗಳಿಗೆ ಸಂದರ್ಶನ ಮೇ 28 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ಶಾಲೆಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಜರಿರಬೇಕು. ದೂರವಾಣಿ 9995992949 ಸಂಪರ್ಕಿಸಬಹುದು.
ಉಪ್ಪಳ: ಬಂದ್ಯೋಡು ಸಮೀಪದ ಹೇರೂರು ಮೀಪ್ರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿವಿ|ಧ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ನಡೆಯಲಿದೆ. ಟೀಚರ್ ಇನ್ ಅಕೌಂಟೆನ್ಸಿ ಮತ್ತು ಆಡಿಟಿಂಗ್, ವೊಕೇಶನಲ್ ಟೀಚರ್ ಫಾರ್ ಕಾಮರ್ಸ್, ಇಡಿ, ಗಣಿತ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿ (ಪಿಜಿ, ಬಿ.ಎಡ್, ಎಸ್‍ಇಟಿ) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ) ಹುದ್ದೆಗಳಿಗೆ ಮೇ 27 ರಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ. ದೂರವಾಣಿ 9447794883, 9446959989 ಸಂಪರ್ಕಿಸಬಹುದು.