ಬದಿಯಡ್ಕ: ಕಾಸರಗೋಡು ತಾಲೂಕು ಕೆಂಪುಕಲ್ಲು ಕಾರ್ಮಿಕರ ಸಂಯುಕ್ತ ಸಂಘಟನೆಗಳು ವಿವಿಧ ಬೇಡಿಕೆಗಳೊಂದಿಗೆ ಬುಧವಾರದಿಂದ ಅರ್ನಿಷ್ಟಾವಧಿ ಮುಷ್ಕರ |ಆರಂಭಗೊಂಡಿದೆ. ಸಂಬಳ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಸರಗೋಡು ತಾಲೂಕಿನಾದ್ಯಂತ ಕೆಂಪುಕಲ್ಲು ಸಾಗಾಟದ ಲಾರಿ ಚಾಲಕರು ಹಾಗೂ ಲೋಡಿಂಗ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಂಯುಕ್ತ ಯೂನಿಯನ್ ಕಾಸರಗೋಡು ತಾಲೂಕು ಅಧ್ಯಕ್ಷ ಪ್ರಮೋದ್ ಉದುಮ ಹಾಗೂ ಕಾರ್ಯದರ್ಶಿ ಪ್ರಕಾಶ್ ಮಾನ್ಯ ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.