ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್.ಮುರಳಿ, ಏರಿಯಾ ಸಮಿತಿ ಅಧ್ಯಕ್ಷ ಕೊಟ್ಟಾರ ವಾಸುದೇವ ನಾಯರ್, ಅಸಿಸ್ಟೆಂಟ್ ಕಮಿಷನರ್ ವಿನೋದ್ ಭೇಟಿ ನೀಡಿ ಮಧೂರು ದೇವಸ್ಥಾನದ ನವೀಕರಣ ಕಾಮಗಾರಿಯನ್ನು ವೀಕ್ಷಿಸಿದರು.
ಮಧೂರು ದೇವಸ್ಥಾನದ ನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ಕಾರ್ಯದರ್ಶಿ ಮುರಳಿ ಗಟ್ಟಿ, ಕ್ಷೇತ್ರ ಸಂರಕ್ಷಣಾ ಸಮಿತಿಯ ರಾಜ್ಯ ಸಮಿತಿ ಸದಸ್ಯ ಅಪ್ಪಯ್ಯ ನಾೈಕ್ ಮಧೂರು, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು, ಸಂಘಟಕ ಕೆ.ಜಗದೀಶ್ ಕೂಡ್ಲು, ಕೆ.ಗಿರೀಶ್, ದೇವಸ್ಥಾನದ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.