HEALTH TIPS

ಶಾಪಿಂಗ್ ವೆಬ್ ಸೈಟ್ ಗಳು, ಆಯಪ್ ಗಳಲ್ಲಿ ನಕಲಿ ವಿಮರ್ಶೆಗಳ ತಡೆಗೆ ಕೇಂದ್ರದ ಕ್ರಮ

              ಗ್ರಾಹಕ ಹಿತಾಸಕ್ತಿಗಳನ್ನು ರಕ್ಷಿಸಲು ಇ-ಕಾಮರ್ಸ್ ವೆಬ್ಸೈಟ್ಗಳು ಮತ್ತು ಆಯಪ್ಗಳಲ್ಲಿ ಪೋಸ್ಟ್ ಮಾಡಲಾಗುತ್ತಿರುವ ನಕಲಿ ವಿಮರ್ಶೆಗಳನ್ನು ತಡೆಯಲು ವ್ಯವಸ್ಥೆಯೊಂದನ್ನು ರೂಪಿಸುವುದಾಗಿ ಸರಕಾರವು ಶನಿವಾರ ಹೇಳಿದೆ.

             ಗ್ರಾಹಕ ವ್ಯವಹಾರಗಳ ಸಚಿವಾಲಯವು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ(ಎಎಸ್ಸಿಐ)ಯ ಜೊತೆಗೂಡಿ ಶುಕ್ರವಾರ ಇ-ಕಾಮರ್ಸ್ ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಅವುಗಳ ವೇದಿಕೆಗಳಲ್ಲಿಯ ನಕಲಿ ವಿಮರ್ಶೆಗಳ ಪ್ರಮಾಣದ ಕುರಿತು ಚರ್ಚಿಸಲು ವರ್ಚುವಲ್ ಸಭೆಯನ್ನು ನಡೆಸಿತ್ತು.

              ಗ್ರಾಹಕರು ಆನ್ಲೈನ್ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸುವಾಗ ನಕಲಿ ವಿಮರ್ಶೆಗಳು ಅವರ ದಾರಿಯನ್ನು ತಪ್ಪಿಸುತ್ತವೆ.

                 ಭಾರತದಲ್ಲಿಯ ಇ-ಕಾಮರ್ಸ್ ಸಂಸ್ಥೆಗಳು ಅನುಸರಿಸುತ್ತಿರುವ ಸದ್ಯದ ವ್ಯವಸ್ಥೆ ಮತ್ತು ಜಾಗತಿಕವಾಗಿ ಲಭ್ಯ ಅತ್ಯುತ್ತಮ ಕಾರ್ಯವಿಧಾನಗಳನ್ನು ಪರಿಶೀಲಿಸಿದ ಬಳಿಕ ಗ್ರಾಹಕ ವ್ಯವಹಾರಗಳ ಇಲಾಖೆಯು ಮಾರ್ಗಸೂಚಿ ಚೌಕಟ್ಟೊಂದನ್ನು ಅಭಿವೃದ್ಧಿಗೊಳಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

                ಇ-ಕಾಮರ್ಸ್ ವರ್ಚುವಲ್ ಖರೀದಿ ಅನುಭವವನ್ನು ಒಳಗೊಂಡಿರುತ್ತದೆ ಮತ್ತು ಉತ್ಪನ್ನವನ್ನು ಭೌತಿಕವಾಗಿ ವೀಕ್ಷಿಸುವ ಅಥವಾ ಪರೀಕ್ಷಿಸುವ ಅವಕಾಶವಿರುವುದಿಲ್ಲ. ಹೀಗಾಗಿ ಗ್ರಾಹಕರು ಈಗಾಗಲೇ ಉತ್ಪನ್ನವನ್ನು ಅಥವಾ ಸೇವೆಯನ್ನು ಖರೀದಿಸಿರುವ ಬಳಕೆದಾರರ ಅಭಿಪ್ರಾಯ ಮತ್ತು ಅನುಭವವನ್ನು ತಿಳಿದುಕೊಳ್ಳಲು ಇ-ಕಾಮರ್ಸ್ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುವ ವಿಮರ್ಶೆಗಳನ್ನೇ ಪ್ರಮುಖವಾಗಿ ನೆಚ್ಚಿಕೊಳ್ಳುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries