ಬದಿಯಡ್ಕ: ಮಹಾಜನ ವಿದ್ಯಾವರ್ಧಕ ಸಂಘ ಪೆರಡಾಲ, ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಅವರು ಬರೆದಿರುವ ನಾಲ್ಕು ಕೃತಿಗಳ ಬಿಡುಗಡೆ ಹಾಗೂ ಪ್ರೊ.ಪಿ. ಸುಬ್ರಾಯ ಭಟ್ ಸಂಸ್ಮರಣಾ ಸಮಾರಂಭ ಮೇ.8 ರಂದು ಬೆಳಿಗ್ಗೆ 9.30 ರಿಂದ 1.30ರ ವರೆಗೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು, ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಕ್ಕೆ ಕೃತಿ ಬಿಡುಗಡೆ ಸಮಾರಂಭ ನಡೆಯಲಿದ್ದು, ಬೆಳ್ಳಿಗೆ ನಾರಾಯಣ ಮಣಿಯಾಣಿ ಹಾಗೂ ಶಶಿಕಲಾ ಬಾಯಾರು ಕೃತಿ ಬಿಡುಗಡೆಗೊಳಿಸುವರು. ಡಾ. ಭರಣ್ಯ ಅವರು ಬರೆದಿರುವ ವ್ಯೂಹ ಕೃತಿಯನ್ನು ತೆಕ್ಕುಂಜೆ ಕುಮಾರ ಸ್ವಾಮಿ, ವಿನಾಶಕಾಲೇ ಕೃತಿಯನ್ನು ಡಾ.ಯು.ಮಹೇಶ್ವರಿ, ಭಾರ್ಗವ ಶಾರ್ದೂಲ ಕೃತಿಯನ್ನು ಡಾ.ರತ್ನಾಕರ ಮಲ್ಲಮೂಲೆ, ಕಾಲಚಕ್ರ ಕೃತಿಯನ್ನು ಬಾಲಕೃಷ್ಣ ಬೇರಿಕೆ ಪರಿಚಯಮಾಡುವರು. ಕೃತಿಕಾರ ಡಾ.ಹರಿಕೃಷ್ಣ ಭರಣ್ಯ ಮಾತನಾಡುವರು. ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ಕಾರ್ತಿಕ್ ಪಡ್ರೆ ಶುಭಾಶಂಸನೆಗೈಯ್ಯುವರು. ಪ್ರೊ.ಪಿ. ಸುಬ್ರಾಯ ಭಟ್ ಅವರ ಸಂಸ್ಮರಣೆ ಈ ಸಂದರ್ಭ ನಡೆಯಲಿದ್ದು, ಡಾ.ಪ್ರಮೀಳಾ ಮಾಧವ್ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ವಾಣಿ ಪಿ.ಎಸ್. ನುಡಿನಮನ ಸಲ್ಲಿಸುವರು. ಕಥೆಗಾರ್ತಿ ಸ್ನೇಹಲತಾ ದಿವಾಕರ್, ಮುಖ್ಯೋಪಾಧ್ಯಾಯ ಎಂ.ಕೆ.ಶಿವಪ್ರಕಾಶ್ ಉಪಸ್ಥಿತರಿರುವರು.