ಕಾಸರಗೋಡು: ಅಗಸರಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಸ್ತುತ ಎಲ್ ಪಿ ಎಸ್ ಟಿ ಕನ್ನಡ (ನಾಲ್ಕು) ತಾತ್ಕಾಲಿಕ ಶಿಕ್ಷಕರ ಹುದ್ದೆಗೆ ನೇಮಕತಿ ನಡೆಯಲಿದೆ. ಉದ್ಯೋಗಾರ್ಥಿಗಳು ಅಸಲಿ ದಾಖಲೆಗಳೊಂದಿಗೆ ಮೇ 28 ರಂದು ಬೆಳಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
ಉಪ್ಪಳ: ಸರ್ಕಾರಿ ಹಿಂದೂಸ್ಥಾನಿ ಹಿರಿಯ ಪ್ರಾಥಮಿಕ ಶಾಲೆ ಕುರ್ಚಿಪಳ್ಳ ಉಪ್ಪಳದಲ್ಲಿ ಪೂರ್ಣ ಕಾಲಿಕ ಉರ್ದು ಶಿಕ್ಷಕರು(1), ಅರೆಬಿಕ್(1), ಎಲ್.ಪಿ.ಎಸ್.ಎ. ಮಲೆಯಾಳಂ(3 ಹುದ್ದೆಗಳು), ಯುಪಿಎಸ್ ಎ ಕನ್ನಡ(1), ಯುಪಿಎಸ್ ಎ ಮಲೆಯಾಳಂ (3 ಹುದ್ದೆಗಳು) ಹುದ್ದೆಗೆ ದಿನವೇತನ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಮೇ.30 ರಂದು ಬೆಳಿಗ್ಗೆ 10.30 ಕ್ಕೆ ಶಾಲೆಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಆಸಕ್ತರು ಹಾಜರಾಗಬಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.