ಕಾಸರಗೋಡು: ಕೇರಳದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಹಕಾರಿ ಸಂಸ್ಥೆಗಳ ಮೇಲೆ ಸರ್ಕಾರ ನಡೆಸುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಆಗ್ರಹಿಸಿದರು.
ಸಹಕಾರಿ ಪ್ರಜಾಸತ್ತಾತ್ಮಕ ವೇದಿಕೆ ನೇತೃತ್ವದಲ್ಲಿ ಸಹಕಾರಿ ಸಂಘಗಳ ಜಂಟಿ ನಿಬಂಧಕರ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳ ಬ್ಯಾಂಕ್ ಮರೆಯಲ್ಲಿ ಸಹಕಾರಿ ಸಂಘಗಳನ್ನು ದಮನಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಸಹಕಾರಿ ಕ್ಷೇತ್ರವನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವ ಆದಾಯ ತೆರಿಗೆ ಇಲಾಖೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ. ನೀಲಕಂಠನ್ ಅಧ್ಯಕ್ಷ ತೆ ವಹಿಸಿದ್ದರು. ಮಾಜಿ ಪ್ರಧಾನ ಕಾರ್ಯದರ್ಶಿಕೆ.ಪಿ.ಕುಞÂಕಣ್ಣನ್, ಡಿಸಿಸಿ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್, ಯುಡಿಎಫ್ ಜಿಲ್ಲಾ ಸಂಚಾಲಕ ಎ.ಗೋವಿಂದನ್ ನಾಯರ್, ಕೆಸಿಇಎಫ್ ರಾಜ್ಯಾಧ್ಯಕ್ಷ ಪಿ.ಕೆ.ವಿನಯಕುಮಾರ್, ಎಂ.ಅಸಿನಾರ್, ಪಿ.ಭಾಸ್ಕರನ್ ನಾಯರ್, ಪಿ.ಕೆ.ವಿನೋದ್ ಕುಮಾರ್, ಪಿ.ಎ.ಅಶ್ರಫಲಿ, ಎಂ.ಕುಂಞಂಬು ನಂಬಿಯಾರ್, ಮಾಮನಿ ವಿಜಯನ್, ಕರುಣ್ ಥಾಪ, ಪಿ.ವಿ.ಸುರೇಶ್, ಕೆ.ಪಿ.ಪ್ರಕಾಶನ್, ವಿ.ಕೃಷ್ಣನ್, ಪವಿತ್ರನ್ ಸಿ.ನಾಯರ್, ಆರ್.ಗಂಗಾಧರನ್, ಸಿ.ಇ ಜಯನ್, ಕೆ.ಶಶಿ, ಕೊಪ್ಪಳ ಪ್ರಭಾಕರನ್, ಕೆ.ವಾರಿಜಾಕ್ಷನ್, ಎ.ವಾಸುದೇವನ್, ಪಿ.ಕೆ.ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು.