ಬದಿಯಡ್ಕ: ಎಡನೀರು ಶ್ರೀಈಶ್ವರಾನಂದ ಭಾರತೀ ಸ್ವಾಮೀಜಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಡನೀರಿನ ಉಡುಪಮೂಲೆ ಭೂಮಿಕಾ ಪ್ರತಿಷ್ಠಾನ ಆಯೋಜಿಸಿರುವ ಐದು ದಿನಗಳ ಕನ್ನಡ ಸಂಸ್ಕøತಿ ಶಿಬಿರದ ಅಂಗವಾಗಿ ಗುರುವಾರ ಬದಿಯಡ್ಕದ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಇವರಿಂದ ಸುಗಮ ಸಂಗೀತ ಹಾಗೂ ಸಮೂಹ ಗಾಯನ ತರಬೇತಿ, ಪ್ರಾತ್ಯಕ್ಷಿಕೆಗಳು ನಡೆಯಿತು.
ಹಾರ್ಮೋನಿಯಂ ನಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು, ತಬಲಾದಲ್ಲಿ ಪದ್ಮನಾಭ ಆಚಾರ್ಯ ವಿದ್ಯಾನಗರ ಸಹಕರಿಸಿದರು. ಈ ಸಂದರ್ಭ ಪ್ರಾರ್ಥನಾ ಗೀತೆ, ನಾಡಗೀತೆ, ಜನಪದ ಗೀತೆ, ಭಾವಗೀತೆ ಮೊದಲಾದ ವಿಭಾಗಗಳ ಆಲಾಪನೆ ಸಹಿತ ತರಬೇತಿ ನೀಡಲಾಯಿತು. ಶುಕ್ರವಾರ ರಂಗಕರ್ಮಿ ಉದಯ ಸಾರಂಗ ಅವರ ನೇತೃತ್ವದಲ್ಲಿ ರಂಗ ಚಟುವಟಿಕೆಗಳ ತರಬೇತಿ ನಡೆಯಿತು.