HEALTH TIPS

ವಿದೇಶಿ ವಸ್ತುಗಳ ಮೇಲೆ ದಾಸ್ಯ ತಗ್ಗಿಸಿ: ಪ್ರಧಾನಿ ಮೋದಿ

           ಪುಣೆ: ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಹೊರತಾಗಿಯೂ 'ದೇಶದ ಜನತೆ ವಿದೇಶಿ ಉತ್ಪನ್ನಗಳ ಮೇಲಿನ ದಾಸ್ಯವನ್ನು ತಗ್ಗಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

          ಶುಕ್ರವಾರ ವಿಡಿಯೊ ಲಿಂಕ್ ಮೂಲಕ ಜೈನ್ ಅಂತರಾಷ್ಟ್ರೀಯ ವ್ಯಾಪಾರ ಸಂಸ್ಥೆಯ 'ಜಿಟೊ ಕನೆಕ್ಟ್-2022' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 'ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು.

           ಜೊತೆಗೆ ವೋಕಲ್ ಫಾರ್ ಲೋಕಲ್'(ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹಿಸುವುದು) ಮೇಲೆ ಹೆಚ್ಚು ಅವಲಂಬನೆಯಾಗಬೇಕು. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ವೋಕಲ್ ಫಾರ್ ಲೋಕಲ್ ಮಂತ್ರದತ್ತ ಹೆಚ್ಚಿನ ಚಿತ್ತ ಹರಿಸಬೇಕು' ಎಂದು ಜಿಟೊ ಸಂಸ್ಥೆಯನ್ನು ಉದ್ದೇಶಿಸಿ ಹೇಳಿದರು.

            ನಾವು ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕು. ನಮ್ಮ ವಸ್ತುಗಳ ರಫ್ತಿಗಾಗಿ ಹೊಸ ಜಾಗಗಳನ್ನು ಕಂಡುಕೊಳ್ಳಬೇಕು. ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಉಂಟು ಮಾಡದ ವಸ್ತುಗಳನ್ನು ಉತ್ಪಾದಿಸಬೇಕು. ಇಂದು ದೇಶದಲ್ಲಿ ಪ್ರತಿ ದಿನವೂ ಹತ್ತಾರು ಸ್ಟಾರ್ಟಪ್‌ಗಳು ದಾಖಲಾಗುತ್ತಿವೆ. ಸ್ವಾವಲಂಬನೆಯು ನಮ್ಮ ದಾರಿಯಾಗಿದೆ. ಸರ್ಕಾರದ ಪ್ರಕ್ರಿಯೆಗಳೆಲ್ಲವೂ ಪಾರದರ್ಶಕವಾಗಿವೆ ಎಂದರು.

          ಜಿಟೊದ ಯುವ ಸದಸ್ಯರು ಮತ್ತು ಉದ್ಯಮಿಗಳು ಸ್ವಾಭಾವಿಕ ಕೃಷಿಯಲ್ಲಿ ಹೂಡಿಕೆ ಮಾಡಬೇಕು. ಆಹಾರ ಸಂಸ್ಕರಣೆ, ಕೃಷಿ ತಂತ್ರಜ್ಞಾನ, ಮರು ಬಳಕೆಯ ಮೇಲೆ ಚಿತ್ತ ಹರಿಸುವ ಸರ್ಕ್ಯುಲರ್ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬೇಕು ಎಂದು ಪ್ರಧಾನಿ ಮೋದಿ ಅವರು ಸಲಹೆ ನೀಡಿದರು.

           ಅಲ್ಲದೆ 40 ಲಕ್ಷ ಮಾರಾಟಗಾರರು ನೋಂದಣಿಯಾಗಿರುವ ಸರ್ಕಾರದ ಇ-ಮಾರುಕಟ್ಟೆ ಪೋರ್ಟಲ್ ಬಗ್ಗೆ ಜಿಟೊ ಪ್ರತಿನಿಧಿಗಳು ಅಧ್ಯಯನ ನಡೆಸಬೇಕು. ಸಣ್ಣ ಮತ್ತು ಮಧ್ಯಮ ಉದ್ಯಮಿಗಳು, ಸ್ವಸಹಾಯ ಗುಂಪುಗಳ ಸದಸ್ಯರೇ ಹೆಚ್ಚಿನವರಿದ್ದಾರೆ. ಈ ಹೊಸ ವ್ಯವಸ್ಥೆ ಮೇಲೆ ಜನರು ಭರವಸೆಯಿಟ್ಟಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರು, ಸಣ್ಣ ಅಂಗಡಿ ಮಾಲಿಕರು ಮತ್ತು ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ. ಇಂದು ಇಡೀ ವಿಶ್ವವೇ ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಇದು ಎಲ್ಲಾ ಭಾರತೀಯರ ಹೆಮ್ಮೆ ಮತ್ತು ಆತ್ಮವಿಶ್ವಾಸವಾಗಿದೆ. ಜಾಗತಿಕ ಶಾಂತಿ, ಅಭಿವೃದ್ಧಿ, ಜಾಗತಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತದ ಪರಿಹಾರ ಮಾರ್ಗಗಳನ್ನು ವಿಶ್ವ ಒಪ್ಪಿಕೊಂಡಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries