HEALTH TIPS

ಮುನ್ನೆಚ್ಚರಿಕೆ ಡೋಸ್‌: ವಿದೇಶಕ್ಕೆ ತೆರಳುವವರಿಗೆ ಅವಧಿಗೆ ಮೊದಲೇ ಪಡೆಯಲು ಅವಕಾಶ

          ನವದೆಹಲಿ: ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಇರುವ ನಿಯಮವನ್ನು ಕೇಂದ್ರ ಸರ್ಕಾರ ಗುರುವಾರ ಸಡಿಲಿಸಿದೆ. ಆ ಪ್ರಕಾರ ಎರಡನೇ ಡೋಸ್‌ ಲಸಿಕೆ ಪಡೆದು 9 ತಿಂಗಳು ಆಗದೇ ಇದ್ದರೂ ವಿದೇಶಕ್ಕೆ ತೆರಳುವವರು ಮುನ್ನೆಚ್ಚರಿಕೆ ಡೋಸ್‌ ಪಡೆಯಬಹುದಾಗಿದೆ.

          'ಕೋವಿನ್ ಜಾಲತಾಣದಲ್ಲಿ ಶೀಘ್ರವೇ ಈ ನೂತನ ಸೇವೆ ಲಭ್ಯವಾಗಲಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಟ್ವೀಟ್‌ ಮಾಡಿದ್ದಾರೆ.

             ಕಳೆದ ವಾರ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ),ವಿದೇಶಕ್ಕೆ ತೆರಳುವ ನಾಗರಿಕರು, ವಿದ್ಯಾರ್ಥಿಗಳಿಗೆ ಎರಡನೇ ಡೋಸ್‌ ಮತ್ತು ಮುನ್ನೆಚ್ಚರಿಕೆ ಡೋಸ್‌ ನಡುವೆ ಕಡ್ಡಾಯವಾಗಿ 9 ತಿಂಗಳ ಅಂತರ ಇರಬೇಕು ಎಂಬ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries