HEALTH TIPS

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ಲೋಕಾರ್ಪಣೆ: ಪೂರ್ವಭಾವಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು

             ಮಧೂರು: ಸಾಹಿತ್ಯ - ಸಾಂಸ್ಕøತಿಕ ನೆಲೆಯಲ್ಲಿ ಕಳೆದ ಒಂದು ದಶಕದಿಂದ ಕಾಸರಗೋಡಿನಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ಲೋಕಾರ್ಪಣೆಯ ಅಂಗವಾಗಿ ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. 

                 ಸಾಂಸ್ಕøತಿಕ ಭವನದ ಪ್ರವೇಶೋತ್ಸವದ ಅಂಗವಾಗಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಯಿತು. ಯಕ್ಷಗಾನ ಹಿಮ್ಮೇಳದ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರ ಉಪಸ್ಥಿತಿಯಲ್ಲಿ ಯಕ್ಷಗಾನ ನೃತ್ಯ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಭಜನೆ, ತಾಳಮದ್ದಳೆ ಹಾಗು ಪ್ರಸಿದ್ಧ ಧರ್ಮಸ್ಥಳ ಮೇಳದ ಬಯಲಾಟದೊಂದಿಗೆ ಪ್ರವೇಶೋತ್ಸವ ಸಂಪನ್ನಗೊಂಡಿತು. 


                  ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಗಮಿಸಿ ಆಶೀರ್ವಚನ ನೀಡಿದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಭೇಟಿ ನೀಡಿ ಪ್ರತಿಷ್ಠಾನದ ಕಾರ್ಯ ಯೋಜನೆ ಬಗ್ಗೆ ಶ್ಲಾಘಿಸಿದರು. ಕಾಸರಗೋಡು ಹಾಗು ಕರ್ನಾಟಕದ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 


                  ಕುಂಬಳೆ ವಾಸುದೇವ ಅಡಿಗ ಅವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಪ್ರವೇಶೋತ್ಸವ ನಡೆಯಿತು. ಪುತ್ತಿಗೆ ಹೊಳ್ಳರ ಭಾಗವತಿಕೆ, ಮಾಂಬಾಡಿಯವರ ಚೆಂಡೆ, ಎಸ್.ಎನ್.ಮಯ್ಯ ಮೃದಂಗ, ಉಪಾಸನ ಮತ್ತು ಕಿಶನ್ ಅವರ ಯಕ್ಷಗಾನ ವೇಷ, ಕೀರ್ತಿ ಮೀಯಪದವು ಭರತನಾಟ್ಯ, ಸಾಂದ್ರಾ ಕಾವುಮಠ ಇವರಿಂದ ಶಾಸ್ತ್ರೀಯ ಸಂಗೀತ, ರಾಜೇಶ್ವರಿ, ರಾಧಾಮಣಿ, ಪೂರ್ಣಿಮಾ ಇವರಿಂದ ಸಂಕೀರ್ತನೆ, ರಾಧಾಕೃಷ್ಣ ಕಲ್ಚಾರ್ ನೇತೃತ್ವದಲ್ಲಿ ಗಂಗಾವತರಣ ಯಕ್ಷಗಾನ ತಾಳಮದ್ದಳೆ ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries